ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮ್ಯಾಂಡರಿನ್ ಭಾಷೆಗೆ ರೀಮೇಕ್ ಆಗಲಿದೆ ‘ದೃಶ್ಯಂ-2’ ಸಿನಿಮಾ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ನಟ ಮೋಹನ್ ಲಾಲ್ ಅಭಿನಯದ ದೃಶ್ಯಂ-2 ಮಲಯಾಳಂ ಸಿನಿಮಾ ಅಮೇಜಾನ್ ಪ್ರೈಮ್​​​​​ನಲ್ಲಿ, ಓಟಿಟಿಯಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಬಳಿಕ ತೆಲುಗಿಗೆ ರೀಮೇಕ್ ಆಗಿದ್ದು, ಬಿಡುಗಡೆ ಬಾಕಿ ಉಳಿದಿದೆ. ಜೊತೆಗೆ ಹಿಂದಿ ಮತ್ತು ತೆಲುಗಿಗೆ ರೀಮೇಕ್ ಹಕ್ಕುಗಳು ಮಾರಾಟವಾಗಿದ್ದು, ಲಾಕ್​ಡೌನ್​ ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ. ತಮಿಳಿನಲ್ಲೂ ಚಿತ್ರ ರೀಮೇಕ್ ಮಾಡುವ ಬಗ್ಗೆ ಮಾತುಕಥೆ ನಡೆಯುತ್ತಿದೆ.
ಈ ಮಧ್ಯೆ ಚಿತ್ರವು ಮ್ಯಾಂಡರಿನ್ ಭಾಷೆಗೆ ರೀಮೇಕ್ ಆಗಿ, ಚೀನಾದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುವುದಾಗಿ ಸುದ್ದಿ ಇದೆ.
ದೃಶ್ಯಂ-2ಗೂ ಮುನ್ನ ದೃಶ್ಯಂ ಚಿತ್ರವೂ ಮ್ಯಾಂಡರಿನ್ ಭಾಷೆಗೆ ‘ಶೀಪ್ ವಿಥೌಟ್ ಎ ಶೆಪರ್ಡ್’ ಎಂಬ ಹೆಸರಿನಲ್ಲಿ ರೀಮೇಕ್ ಆಗಿ ಹಿಟ್ ಆಗಿತ್ತು. 2019ರಲ್ಲಿ ಚೀನಾದಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ 9ನೇ ಸ್ಥಾನ ಪಡೆದಿತ್ತು. ಇದೀಗ ದೃಶ್ಯಂ 2 ಚಿತ್ರದ ರೀಮೇಕ್ ಹಕ್ಕುಗಳು ಸಹ ಮ್ಯಾಂಡರಿನ್ ಭಾಷೆಗೆ ಮಾರಾಟವಾಗಿರುವ ಮಾಹಿತಿ ದೊರೆತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss