Friday, August 12, 2022

Latest Posts

ಅಡುಗೆ ಮಾಡುವಾಗ ಮಹಿಳೆ ತಲೆಕೂದಲಿಗೆ ತಗುಲಿದ ಬೆಂಕಿ.. ಮುಂದೇನಾಯ್ತು?

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಅಡುಗೆ ಮಾಡುವಾಗ ನಾನಾ ಬೆಂಕಿ ಅವಗಢಗಳು ಆಗುತ್ತಲೇ ಇರುತ್ತವೆ.
ಪ್ರತಿದಿನ, ಪ್ರತಿಹೊತ್ತು ಅಡುಗೆ ಮಾಡುವ ಮಹಿಳೆಯರ ಕೈ ಮೇಲೆ ಒಂದಾದರೂ ಸುಟ್ಟ ಗುರುತು ಇದ್ದೇ ಇರುತ್ತದೆ.
ಆದರೆ ಇದೆಲ್ಲದಕ್ಕಿಂತ ಒಂದು ಹೆಜ್ಜೆ ಮುಂದೆ ಎಂದರೆ ತಲೆಕೂದಲಿಗೇ ಬೆಂಕಿ ತಗುಲುವುದು. ಹೌದು ಅಡುಗೆ ಮಾಡುತ್ತಿದ್ದ ಮಹಿಳೆ ತಲೆಕೂದಲಿಗೆ ಬೆಂಕಿ ತಗುಲಿದ ವಿಡಿಯೋ ಒಂದು ವೈರಲ್ ಆಗಿದೆ.
ಮಹಿಳೆಗೆ ಗುಂಗುರು ಕೂದಲಿದ್ದು, ಅಡುಗೆ ಮಾಡುತ್ತಾ ಶೆಲ್ಫ್‌ನಿಂದ ಏನನ್ನೋ ತೆಗೆಯಲು ಕೆಳಗೆ ಬಗ್ಗಿದ್ದಾರೆ. ಈ ವೇಳೆ ಸ್ಟೋವ್‌ನಿಂದ ಕೂದಲಿಗೆ ಬೆಂಕಿ ತಾಗಿದೆ.
ಸಾಮಾನ್ಯವಾಗಿ ಒಂದು ಕೂದಲು ಸುಟ್ಟರೂ ವಾಸನೆಗೆ ತಿಳಿದುಬಿಡುತ್ತದೆ. ಆದರೆ ಈ ಮಹಿಳೆಗೆ ತನ್ನ ತಲೆಯಲ್ಲಿ ಬೆಂಕಿ ಇದೆ ಎನ್ನೋದು ತಿಳಿಯಲು ಸೆಕೆಂಡುಗಳೇ ಬೇಕಾಗಿದೆ.
ದಟ್ಟವಾದ ಕೂದಲಿರುವ ಕಾರಣ ತಲೆಬುರುಡೆಗೆ ಬಿಸಿ ತಾಕಿಲ್ಲ. ತನ್ನ ಕೆಲಸ ಮಾಡುತ್ತಾ ಇದ್ದ ವೇಳೆ ಶೆಲ್ಫ್‌ನಲ್ಲಿ ಏನನ್ನೋ ತೆಗೆಯಲು ಮತ್ತೆ ಬಗ್ಗಿ ನೋಡಿದಾಗ ತಲೆಯಲ್ಲಿ ಬೆಂಕಿ ಇರುವುದು ತಿಳಿಯುತ್ತದೆ. ಕೈಯಿಂದಲೇ ಮಹಿಳೆ ಬೆಂಕಿ ಆರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಸ್ವಲ್ಪ ಜಾಗರೂಕರಾಗಿ ಇಲ್ಲದಿದ್ದರೆ ಹೇಗೆ ಅಪಾಯ ಆಗುತ್ತದೆ ಎನ್ನುವುದನ್ನು ತಿಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss