ಹೊಸದಿಗಂತ ಆನ್ಲೈನ್ ಡೆಸ್ಕ್:
ರಾಜಧಾನಿಯಲ್ಲಿ ಇನ್ನೇನು ಒಂದೇ ವಾರದಲ್ಲಿ ಮೊದಲ ಎಲೆಕ್ಟ್ರಿಕ್ ಬಸ್ ಓಡಾಟ ನಡೆಸಲಿದೆ.
ಹೌದು, ಎಲೆಕ್ಟ್ರಿಕ್ ಬಸ್ ಸಂಚಾರದ ಕನಸು ನನಸಾಗಲಿದ್ದು, ಮೊದಲ ಹಂತದಲ್ಲಿ ಸೆ.30 ರಂದು ಬಸ್ ಬರಲಿದೆ.
ತದನಂತರ ಹಂತಹಂತವಾಗಿ ಬಸ್ಗಳು ಆಗಮಿಸಲಿವೆ.
ಸ್ಮಾರ್ಟ್ಸಿಟಿ ಯೋಜನೆ ಅನ್ವಯ 90 ಬಸ್ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ಕಳೆದ ವರ್ಷವೇ ಟೆಂಡರ್ ಆಹ್ವಾನಿಸಲಾಗಿತ್ತು. ಆರು ತಿಂಗಳಲ್ಲೇ ಬಸ್ಗಳು ಆಗಮಿಸಬೇಕಿತ್ತು. ಆದರೆ ಕೊರೋನಾ ಕಾರಣದಿಂದ ಎಲ್ಲವೂ ವಿಳಂಬವಾಗಿದೆ. 30 ರಿಂದ 35 ಸೀಟುಗಳನ್ನು ಹೊಂದಿರುವ 9 ಮೀಟರ್ ಉದ್ದದ ಬಸ್ ಇದಾಗಿರಲಿದೆ.