ಹೊಸದಿಗಂತ ವರದಿ, ತುಮಕೂರು:
ತುಮಕೂರು ಸಿದ್ಧಗಂಗಾ ಆಸ್ಪತ್ರೆ ಜಿಲ್ಲೆಯಲ್ಲೇ ಮೊದಲ ಯಶಸ್ವಿ ಕಿಡ್ನಿ ಕಸಿ ನಡೆಸಿದ್ದು ಆಸ್ಪತ್ರೆಯ ಸಾಧನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಜಿಲ್ಲಾಮಟ್ಟದಲ್ಲಿ ಮೊಟ್ಟ ಮೊದಲ ಪ್ರಯತ್ನ ಇದಾಗಿದ್ದು ಯಶಸ್ವಿ ಕಿಡ್ನಿ ಕಸಿಗೆ ಒಳಪಟ್ಟ ರೋಗಿ ಚೇತರಿಕೆ ಹೊಂದಿ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ರಾಜಸ್ಥಾನ್ ಮೂಲದ ಮಾರ್ವಾಡಿ ಕುಟುಂಬದವರಾದ ೩೨ ವರ್ಷದ ಪ್ರಕಾಶ್ಎಂಬುವವರು ೧೫ ವರ್ಷಗಳಿಂದ ಕಿಡ್ನಿ ಸಮಸ್ಯೆಗೆ ಒಳಗಾಗಿ ಕಳೆದ ಎರಡು ವರ್ಷಗಳಿಂದ ಡಯಾಲಿಸಿಸ್ಪಡೆಯುತ್ತಿದ್ದರು. ಇದರಿಂದ ನಿತ್ರಾಣವಾಗಿದ್ದ ಅವರು ಕಳೆದ 6ತಿಂಗಳ ಹಿಂದೆ ಸಿದ್ಧಗಂಗಾ ಆಸ್ಪತ್ರೆಗೆ ಬಂದು ದಾಖಲಾಗಿದ್ದರು.
ಪ್ರಕಾಶ್ ಅವರ ಪತ್ನಿ ಲಲಿತಾ ತಮ್ಮ ಒಂದು ಕಿಡ್ನಿಯನ್ನು ಕೊಡಲು ಒಪ್ಪಿದ ನಂತರ ಆಸ್ಪತ್ರೆಯ ಕಿಡ್ನಿ ಸ್ಪೆಷಲಿಸ್ಟ್ಡಾ.ಗಣೇಶ್ಎಸ್.ಪ್ರಸಾದ್ನೇತೃತ್ವದ ತಂಡ ಕಿಡ್ನಿಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದು.ಪ್ರಕಾಶ್ ಆರೋಗ್ಯವಾಗಿದ್ದಾರೆ ಸಿದ್ಧಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ಧೇಶಕರಾದ ಡಾ.ಪರಮೇಶ್ವರ್ ತಿಳಿಸಿದ್ದಾರೆ.
ಸಿದ್ಧಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿಯವರು ಆಸ್ಪತ್ರೆ ಗ್ರಾಮೀಣ ಮಟ್ಟದಲ್ಲಿ ಜನರಿಗೆ ಅತ್ಯಾಧುನಿಕ ಸೌಲಭ್ಯಗಳನ್ನ ಕೊಡಬೇಕು ಎನ್ನುವ ಉದ್ದೇಶದಲ್ಲಿ ಪರಮಪೂಜ್ಯ ಶಿವಕುಮಾರ ಶ್ರೀಗಳ ಮಾರ್ಗದರ್ಶನದಂತೆ ಆರಂಭವಾಗಿದೆ. ಮೊಟ್ಟಮೊದಲ ಕಿಡ್ನಿ ಕಸಿ ಯಶಸ್ವಿಯಾಗಿ ಪೂರೈಸಿದ್ದು ರೋಗಿಯ ಹೆಂಡತಿಯೇ ಕಿಡ್ನಿ ದಾನ ಮಾಡುವ ಮೂಲಕ ಆದರ್ಶ ದಾಂಪತ್ಯದ ಸಂದೇಶ ಸಾರುವ ಜೊತೆಗೆ ಕಿಡ್ನಿ ದಾನದ ಮಹತ್ವವನ್ನೂ ಕೂಡ ಎತ್ತಿ ಹಿಡಿದಿದ್ದಾರೆ ಎಂದರು.
ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ಮಾತನಾಡಿ ಭಾರತಾಧ್ಯಂತ ಸರಿಸುಮಾರು ೨ ಲಕ್ಷ ಜನ ಪ್ರತಿನಿತ್ಯ ಡಯಾಲಿಸಿಸ್ಗೆ ಒಳಗಾಗುತ್ತಿದ್ದಾರೆ ಜೊತೆಗೆ ಪ್ರತಿ ೧೦ ಲಕ್ಷ ಜನರಿಗೆ ೨೫೦ ಜನರಂತೆ ವಾರ್ಷಿಕವಾಗಿ ಡಯಾಲಿಸಿಸ್ಚಿಕಿತ್ಸೆ ಪಡೆಯುತ್ತಿದ್ದಾರೆ. ವಾರ್ಷಿಕವಾಗಿ ಕೇವಲ ೬ ಸಾವಿರ ರೋಗಿಗಳು ಕಿಡ್ನಿ ಕಸಿಗೆ ಒಳಗಾಗುತ್ತಿದ್ದು ಈ ಅಂತರ ಕಡಿಮೆಯಾಗಬೇಕೆಂದರೆ ಕಿಡ್ನಿ ಕಸಿ ಚಿಕಿತ್ಸೆಗಳು ನಿರಂತರವಾಗಿ ನಡೆಯಬೇಕು ಎಂದರು.
ಸಿದ್ಧಗಂಗಾ ಆಸ್ಪತ್ರೆ ಕಿಡ್ನಿ ಸ್ಪೆಷಲಿಸ್ಟ್ಡಾ.ಗಣೇಶ್ಮಾತನಾಡಿ ಬೆಂಗಳೂರು ಹೊರತು ಪಡಿಸಿ ತುಮಕೂರು ಸುತ್ತಲಿನ ಯಾವ ಜಿಲ್ಲೆಗಳಲ್ಲಿಯೂ ಇಂತಹ ಕಿಡ್ನಿ ಕಸಿ ನಡೆದಿಲ್ಲ ನಾವು ಯಶಸ್ವಿ ಕಸಿ ಮುಖಾಂತರ ಈ ಸಾಧನೆ ಮಾಡಿದ್ದು ಡಯಾಲಿಸಿಸ್ನಿಂದ ನರಳುವ ರೋಗಿಗಳು ನಮ್ಮ ಆಸ್ಪತ್ರೆಯ ಸೌಲಭ್ಯ ಪಡೆಯಬೇಕು ಎಂದು ಮನವಿ ಮಾಡಿದರು.
ಯೂರಾಲಜಿಸ್ಟ್ಹಾಗೂ ಕಸಿ ತಜ್ಞ ಡಾ.ರಂಗೇಗೌಡ ಮಾತನಾಡಿ ದಾನಿಗಳಿಲ್ಲದೆ ಸಾವಿರಾರು ಜನ ಕಿಡ್ನಿ ಸಮಸ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ. ಹಾಗಾಗಿ ದಾನಿಗಳೂ ಕೂಡ ಹೆಚ್ಚಬೇಕು ಜೊತೆಗೆ ಆಪ್ತರು ಸಾವನ್ನಪ್ಪಿದ್ದಾಗ ಅವರ ಕಿಡ್ನಿ ಸೇರಿದಂತೆ ಅಂಗಾಂಗಳನ್ನ ದಾನ ಮಾಡಿ ಇತರರ ಜೀವ ಉಳಿಸಿ ಆಪ್ತರ ನೆನಪನ್ನ ಚಿರಾಯುಗೊಳಿಸಿಕೊಳ್ಳಬೇಕು ಎಂದರು.
ಸಿದ್ಧಗಂಗಾ ಆಸ್ಪತ್ರೆ ಸಿಇಓ ಡಾ.ಸಂಜೀವ್ ಮಾತನಾಡಿ ಮುಂಬರುವ ದಿನಗಳಲ್ಲಿ ಕೇವಲ ಕಿಡ್ನಿ ಕಸಿಯಷ್ಟೇ ಅಲ್ಲದೆ ಇತರೆ ಅಂಗಗಳ ಕಸಿ ಶಸ್ತ್ರಚಿಕಿತ್ಸೆಯ ಪ್ರಯತ್ನ ಆರಂಭವಾಗುತ್ತಿದ್ದು ಗ್ರಾಮೀಣ ಮಟ್ಟದಲ್ಲಿ ಉತ್ತಮ ಆರೋಗ್ಯ ಕೊಡುವದು ನಮ್ಮ ಉದ್ದೇಶವಾಗಿದೆ ಎಂದರು.
ರೋಗಿ ಕುಟುಂಬಸ್ಥ ಸುನೀಲ್ಮಾತನಾಡಿ ನಮಗೆ ಚಿಕಿತ್ಸೆಗೆ ಮೊದಲು ಆತಂಕವಿತ್ತು. ನಮ್ಮ ಸಹೋದರಿ ಕಿಡ್ನಿ ಕೊಡಲು ಸಂತಸದಿಂದ ಒಪ್ಪಿದರು. ವೈದ್ಯರು ಕೂಡ ಧೈರ್ಯತುಂಬಿ ಯಶಸ್ವಿಯಾಗಿ ಕಿಡ್ನಿ ಕಸಿ ಮಾಡಿದರು. ಇಂದು ನಮ್ಮ ಅಕ್ಕ ಬಾವ ಸಂಪೂರ್ಣ ಚೇತರಿಕೆ ಹೊಂದಿದ್ದು ಆಸ್ಪತ್ರೆ ಬಳಗಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು.
ಇನ್ನೊಬ್ಬ ಕಸಿ ತಜ್ಞ ಡಾ.ನರಸಿಂಹಮೂರ್ತಿ , ಅನಸ್ತಷಿಯಾ ಹಾಗೂ ಐಸಿಯು ಸ್ಪೆಷಲಿಸ್ಟ್ಡಾ.ಮಧು, ಡಾ.ಶಶಿಕಿರಣ್, ನರ್ಸಿಂಗ್ವಿಭಾಗದ ಮುಖ್ಯಸ್ಥ ನಾಗಣ್ಣ, ಟ್ರಾನ್ಸಪ್ಲಾಂಟ್ ಕೋ ಆರ್ಡಿನೇಟರ್ ಕಾರ್ತಿಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.