ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಂಡನ್ಗೆ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸಿ ಗಲಭೆ ಆರಂಭಿಸಿದ್ದು, ವಿಮಾನ ದೆಹಲಿಗೆ ವಾಪಾಸಾಗಿದೆ.
225 ಪ್ರಯಾಣಿಕರಿದ್ದ ವಿಮಾನವು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಿಂದಿರುಗಿದೆ. ಅಶಿಸ್ತಿನಿಂದ ವರ್ತಿಸಿದ ಪ್ರಯಾಣಿಕನನ್ನು ದೆಹಲಿಯಲ್ಲಿ ಕೆಳಗಿಳಿಸಿ ನಂತರ ವಿಮಾನ ಲಂಡನ್ನತ್ತ ಹಾರಿದೆ. ವಿಮಾನಯಾನ ಸಂಸ್ಥೆ ದೆಹಲಿ ವಿಮಾನ ನಿಲ್ದಾಣ ಪೊಲೀಸರಿಗೆ ದೂರು ನೀಡಿದ್ದು, ಪ್ರಯಾಣಿಕನ ವಿಚಾರಣೆ ನಡೆಸಲಾಗುತ್ತಿದೆ.