Saturday, September 23, 2023

Latest Posts

ಮೇಕೆದಾಟು ಪಾದಯಾತ್ರೆ ಸ್ಥಗಿತ: ಇದು ಸಿಎಂ ಅವರ ರಾಜತಾಂತ್ರಿಕ ಜಯ ಎಂದ ಸಚಿವ ಡಾ.ಕೆ‌.ಸುಧಾಕರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೇಕೆದಾಟು ಪಾದಯಾತ್ರೆಯನ್ನು ಕಾಂಗ್ರೆಸ್​​ ಹಿಂಪಡೆಡಿದ್ದು, ಇದು ಸಿಎಂ ಅವರ ರಾಜತಾಂತ್ರಿಕ ಜಯ ಎಂದು ಆರೋಗ್ಯ ಸಚಿವ ಡಾ.ಕೆ‌.ಸುಧಾಕರ್ ಹೇಳಿದರು.

ಬೆಂಗಳೂರು ವಿಕಾಸಸೌಧದಲ್ಲಿ ಸುದ್ದಿಗೋಷ್ಟಿ ಮಾತನಾಡಿದ ಅವರು,ನಾವು ಅವರ ಪ್ರತಿಭಟನೆಗೆ ವಿರೋಧ ಮಾಡಿಲ್ಲ. ಆದರೆ ಇದು ಸೂಕ್ತ ಸಮಯವಲ್ಲ. ಸರ್ಕಾರ ಪಾದಯಾತ್ರೆ ವಿರುದ್ಧ ಕ್ರಮ ಕೈಗೊಂಡಿದೆ. ಅದೇ ರೀತಿ ನಿಯಮ ಉಲ್ಲಂಘಿಸಿದ್ದಕ್ಕೆ ನೋಟಿಸ್ ನೀಡಲಾಗಿದೆ. ಸಿಎಂ ರಾಜತಾಂತ್ರಿಕವಾಗಿ ಇದನ್ನು ನಿಭಾಯಿಸಿದ್ದಾರೆ. ಇದು ರಾಜ್ಯದ ಜನರ ಜಯ ಎಂದರು.

ಈಗಾಗಲೇ ಪಾದಯಾತ್ರೆಯಲ್ಲಿ ಭಾಗವಹಿಸಿದ ಕಾಂಗ್ರೆಸ್‌ ಮುಖಂಡರಿಗೆ ಪಾಸಿಟಿವ್ ಬಂದಿದೆ. ಇನ್ನು ಇದರಿಂದ ಎಷ್ಟು ಅಮಾಯಕರಿಗೆ ಕೋವಿಡ್ ಬಂದಿರಬಹುದು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ನೀರಾವರಿ ಯೋಜನೆಗಳಿಗೆ ಬಿಜೆಪಿ ಬಹಳ ಬದ್ಧತೆ ತೋರಿಸಿದೆ. ಇದು ಅಂತಾರಾಜ್ಯದ ಸಮಸ್ಯೆ ಆಗಿದೆ. ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ತಮಿಳುನಾಡಿನಲ್ಲಿ ಸರ್ಕಾರ ನಿಮ್ಮದೇ ಮೈತ್ರಿ ಪಕ್ಷ ಇದೆ. ಅವರ ಜೊತೆ ಮಾಡನಾ ಡಿ ಪರಿಹಾರ ಹುಡುಕಬೇಕಿತ್ತು. ಪಾದಯಾತ್ರೆ ಮಾಡಿದರೆ ಸಮಸ್ಯೆ ಪರಿಹಾರ ಆಗುತ್ತಾ? ಆ ರೀತಿ ಇದ್ದರೆನಾವೆಲ್ಲರೂ ಪಾದಯಾತ್ರೆ ಮಾಡೋಣ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!