ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ರಾಜ್ಯದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಮೂಲಕ ಮದ್ಯವನ್ನು ಪಾರ್ಸಲ್ ಮೂಲಕ ಕೊಂಡೊಯ್ಯಲು ಅವಕಾಶ ನೀಡಲಾಗಿದ್ದು, ಇದೀಗ ಕ್ಲಬ್ ಗಳಲ್ಲಿಯೂ ಮದ್ಯ ಪಾರ್ಸಲ್ ಮೂಲಕ ಮಾರಾಟ ಮಾಡೋದಕ್ಕೆ ಅವಕಾಶವನ್ನು ಸರ್ಕಾರ ನೀಡಿದೆ.
ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್ ಅಧಿಸೂಚನೆ ಹೊರಡಿಸಿದ್ದು, ಬೆಂಗಳೂರಿನ ಸ್ಪೇಸ್ ಸೆಂಟರ್ ನಲ್ಲಿ ಶೇ.50ರಷ್ಟು ನೌಕರರೊಂದಿಗೆ ಕೆಲಸ ಮಾಡೋದಕ್ಕೆ ಅವಕಾಶ ನೀಡಲಾಗಿದೆ. ಶೇ.50ರಷ್ಟು ನೌಕರರೊಂದಿಗೆ ಪ್ರಿನ್ಸಿಪಲ್ ಅಕೌಂಟ್ ಜೆನರ್ ಹಾಗೂ ಇತರೆ ಬ್ರಾಂಚ್ ಕಚೇರಿಗಳಲ್ಲಿ ಕೆಲಸಕ್ಕೂ ಅನುಮತಿಸಿದೆ.
ಇದಲ್ಲದೇ ರಾಜ್ಯ ಸರ್ಕಾರವು ಟೇಕ್ ಅವೇ ಮೂಲಕ ಕ್ಲಬ್ ನಲ್ಲಿ ಮದ್ಯ ಮಾರಾಟಕ್ಕೂ ಅನುಮತಿಸಲಾಗಿದೆ. ಇದರ ಹೊರತಾಗಿ ಯಾವುದೇ ಚಟುವಟಿಕೆಗೆ ಅವಕಾಶ ಇಲ್ಲ ಎಂಬುದಾಗಿ ತಿಳಿಸಿದ್ದಾರೆ.