ಸಾರ್ವಜನಿಕರ ಸೇವೆಗೆ ಸರ್ಕಾರಿ ಬಸ್ ಓಡಲ್ಲ, ಕಲೆಕ್ಷನ್‌‌ಗಾಗಿ ಬಸ್ ಓಡಿಸ್ತಾರಂತೆ!

ಹೊಸದಿಗಂತ ವರದಿ ಕೊಪ್ಪಳ:

ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ಗಳು ಸಾರ್ವಜನಿಕರ ಸೇವೆ ಮಾಡಲು ಓಡಾಡುತ್ತಿಲ್ಲ. ಹಣ ಸಂಗ್ರಹಕ್ಕೆ ಓಡಾಡುತ್ತಿವೆ. ನಮಗೆ ಹಣ ಸಂಗ್ರಹವೇ ಮುಖ್ಯ ಎಂಬ ನಿಲುವನ್ನು ಸಾರಿಗೆ ಸಿಬ್ಬಂದಿ ಹೊಂದಿದೆ.
ಹೌದು ಇದಕ್ಕೆ ಪುಷ್ಟಿ ನೀಡುವಂತೆ ಕೊಪ್ಪಳ ಬಸ್ ನಿಲ್ದಾಣದ ಸಾರಿಗೆ ಸಿಬ್ಬಂದಿ ಆಗಿರುವ ಈರಣ್ಣ ಎಂಬಾತ ನಮಗೆ ಕಲೆಕ್ಷನ್ ಮುಖ್ಯ ಎಂದಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ಸರಿಯಾಗಿ ಬಸ್ ಸಂಚಾರ ಮಾಡುತ್ತಿಲ್ಲ. ಇರುವ ಬಸ್ ನಿಲ್ಲಿಸಲಾಗಿದೆ. ಕಲೆಕ್ಷನ್ ಗೋಸ್ಕರ ಬಸ್ ನಿಂದ ನಮ್ಮನ್ನು ಕೆಳಗೆ ಇಳಿಸಲಾಗುತ್ತಿದೆ ಇದು ಎಷ್ಟರ ಮಟ್ಟಿಗೆ ಸರಿ? ನೀವು ಕಲೆಕ್ಷನ್‌ಗಾಗಿ ಬಸ್ ಓಡಿಸುತ್ತಿದ್ದೀರೋ ಇಲ್ಲ ಸಾರ್ವಜನಿಕರ ಸೇವೆಗೆ ಓಡಿಸುತ್ತಿದ್ದೀರೋ ಎಂದು ಸಾರಿಗೆ ಸಿಬ್ಬಂದಿ ಈರಣ್ಣನನ್ನು ಪ್ರಶ್ನಿಸಿದ್ದು, ಆಗ ಈರಣ್ಣ ಎಂಬಾತ ಕಲೆಕ್ಷನ್ ಗಾಗಿ ಎಂದು ಹೇಳಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಒಬ್ಬ ಸರ್ಕಾರಿ ಉದ್ಯೋಗಿಯಾಗಿದ್ದು, ವಿದ್ಯಾರ್ಥಿಗಳಿಗೆ ಉದ್ದಟತನದ ಹೇಳಿಕೆ ನೀಡಿದ್ದು, ಹಿರಿಯ ಅಧಿಕಾರಿಗಳಿಗೆ ನಿದ್ರೆಗೆ ಜಾರಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜಿನ್ನಾಪುರ ತಾಂಡ, ಜಿನ್ನಾಪುರ, ಗೋಸಲದೊಡ್ಡಿ ,ಚಾಮಲಾಪುರ , ಮೆತಗಲ್, ಅರಸಿನಕೇರಿ ತಾಂಡ ಮುಂತಾದ ಗ್ರಾಮಗಳಿಗೆ ಕೊಪ್ಪಳ ಕೇಂದ್ರೀಯ ನಿಲ್ದಾಣದಿಂದ ಬಸ್ ಸೌಲಭ್ಯ ಸರಿಯಾಗಿಲ್ಲದಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!