ನೂತನ 9 ವಿಶ್ವವಿದ್ಯಾಲಯಗಳಿಗೆ ಕುಲಸಚಿವರನ್ನು ನೇಮಕ ಮಾಡಿ ಸರಕಾರ ಆದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ರಾಜ್ಯದಲ್ಲಿ ನೂತನವಾಗಿ ಸ್ಥಾಪಿಸಿರುವ ಚಾಮರಾಜನಗರ, ಹಾಸನ, ಕೊಡಗು, ಹಾವೇರಿ, ಕೊಪ್ಪಳ, ಬಾಗಲಕೋಟೆ ಮತ್ತು ಬೀದರ್ ವಿವಿ ಹಾಗೂ ಮಂಡ್ಯ ಮತ್ತು ರಾಯಚೂರು ಸಂಯೋಜಿತ ವಿಶ್ವವಿದ್ಯಾಲಯ ಸೇರಿದಂತೆ 9 ವಿವಿಗಳನ್ನು ಉದ್ಘಾಟಿಸಿದ್ದ ಬೆನ್ನಲ್ಲೇ ಸರ್ಕಾರ ಕುಲಸಚಿವರನ್ನು ನೇಮಕ ಮಾಡಿ ಆದೇಶಿಸಿದೆ.

ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ‘ಜಿಲ್ಲೆಗೊಂದು ವಿಶ್ವವಿದ್ಯಾಲಯ’ ಇರಬೇಕೆಂಬ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ರಾಜ್ಯದಲ್ಲಿ ನೂತನವಾಗಿ 9 ವಿಶ್ವವಿದ್ಯಾಲಯಗಳನ್ನು ವರ್ಚುಯಲ್ ಆಗಿ ಉದ್ಘಾಟಿಸಿದರು.

ಇದರ ಜತೆಯಲ್ಲೇ 7 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು 75 ಕೋಟಿ ರೂಪಾಯಿ ವೆಚ್ಚದಲ್ಲಿ ‘ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ (ಕೆಐಟಿ) ಆಗಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷಿ ಯೋಜನೆಗೂ ಚಾಲನೆ ನೀಡಲಾಯಿತು. ಅಲ್ಲದೆ, ಧಾರವಾಡದಲ್ಲಿ ನೂತನವಾಗಿ ನಿರ್ಮಿಸಿರುವ ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿಯ ಕಟ್ಟಡವನ್ನು ಕೂಡ ಲೋಕಾರ್ಪಣೆ ಮಾಡಲಾಯಿತು.

ಈ ಬೆನ್ನಲ್ಲೇ ಉನ್ನತ ಶಿಕ್ಷಣ ಇಲಾಖೆಯಿಂದ 9 ನೂತನ ವಿವಿಗಳಿಗೆ ಕುಲಸಚಿವರು (ಮೌಲ್ಯಮಾಪನ) ಹುದ್ದೆಗಳಿಗೆ ನೇಮಕ ಮಾಡಿ ಆದೇಶಿಸಿದೆ.

ಹಾಸನ ವಿವಿಗೆ – ಡಾ.ಪುಟ್ಟಸ್ವಾಮಿ, ಚಾಮರಾಜನಗರ ವಿವಿಗೆ – ಡಾ.ಪಿ ಮಾದೇಶ್, ಕೊಪ್ಪಳ ವಿಶ್ವವಿದ್ಯಾಲಯ – ಡಾ.ಕೆವಿ ಪ್ರಸಾದ, ಹಾವೇರಿ ವಿವಿಗೆ- ಪ್ರೊ.ವಿಜಯಲಕ್ಷ್ಮೀ ಶಿರ್ಲಾಪುರ, ಬಾಗಲಕೋಟೆ ವಿವಿ – ಡಾ.ಖಡ್ಕೆ ಉದಯಕುಮಾರ್, ಕೊಡಗು ವಿವಿಗೆ – ಡಾ.ಸೀನಪ್ಪ, ಬೀದರ್ ವಿವಿಗೆ – ಡಾ.ಪರಮೇಶ್ವರನಾಯ್ಕ್ ಬಿ, ಮೈಸೂರು ವಿವಿಗೆ ಡಾ.ಕೆಎಂ ಮಹಾದೇವನ್ ಹಾಗೂ ಬೆಂಗಳೂರು ಉತ್ತರ ವಿವಿ – ಡಾ.ಹೆಚ್ ಸಿ ಮಂಜುನಾಥ್ ನೇಮಿಸಿ ಆದೇಶಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!