ಹಾನಗಲ್ಲ ಕ್ಷೇತ್ರಕ್ಕೆ ಅನುದಾನ ನೀಡುವಲ್ಲಿ ಮಲತಾಯಿ ಧೋರಣೆ ಮಾಡುತ್ತಿರುವ ಸರ್ಕಾರ : ಶಾಸಕ ಮಾನೆ

ಹೊಸದಿಗಂತ ವರದಿ ಹಾವೇರಿ :

ಹಾನಗಲ್ಲ ತಾಲೂಕಿಗೆ ಅನುದಾನ ನೀಡುವಲ್ಲಿ ಮಲತಾಯಿ ಧೋರಣೆಯನ್ನು ಮಾಡುತ್ತಿದೆ. ಜಿಲ್ಲೆಯ ಬೇರೆ ತಾಲೂಕುಗಳಿಗೆ ನೂರು ಕೋಟಿಗೂ ಅಧಿಕ ಅನುದಾನವನ್ನು ನೀಡಿದ್ದರೆ ಹಾನಗಲ್ಲ ತಾಲೂಕಿಗೆ ಕೇವಲ 25 ಕೋಟಿ ರೂಗಳ ಅನುದಾನವನ್ನು ನೀಡಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ದೂರಿದರು.

ನಗರದ ಪ್ರಮಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತ ಐದು ತಿಂಗಳಿಂದ ಆದ ಮಳೆಗೆ ರಸ್ತೆ, ಶಾಲಾ ಕೊಠಡಿಗಳು, ಬೆಳೆ ಹಾನಿ ಸೇರಿದಂತೆ ಮೂಲ ಭೂತ ಸೌಕರ್ಯಗಳು ಹಾಳಾಗಿವೆ. ಇವುಗಳ ಸಮರ್ಪಕ ನಿರ್ವಹಣೆ ಮತ್ತು ಮರು ನಿರ್ಮಾಣಕ್ಕೆ ಬೇಕಾದಷ್ಟು ಅನುದಾನವನ್ನು ಸರ್ಕಾರ ಹಾನಗಲ್ಲ ತಾಲೂಕಿನ ನೀಡಿತ್ತಿಲ್ಲ ಎಂದರು.

ಜನತೆಗೆ ಹೆಚ್ಚಿನ ಸಂಪರ್ಕಕ್ಕೆ ಬರುವ ಕಂದಾಯ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿನ ಆಡಳಿತ ಚುರುಕುಗೊಳಿಸುವುದಕ್ಕೆ ಗ್ರಾಮೀಣ ಭಾಗಗಳಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಭೆಗಳನ್ನು ಹೆಚ್ಚೆಚ್ಚು ಆಯೋಜನೆ ಮಾಡಲಾಗುತ್ತಿದೆ. ಇದರಿಂದ ಗ್ರಾ.ಪಂಮ ಪಿಡಿಒ ಮತ್ತು ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳದಲ್ಲಿ ಕುಳೀತುಕೊಂಡು ಕೆಲಸಮಾಡುವಂತಾಗಿದ್ದರಿಂದ ಹೆಚ್ಚು ಜನರಿಗೆ ಸರ್ಕಾರದ ಯೋಜನೆಗಲು ಸಕಾಲದಲ್ಲಿ ತಲುಪುತ್ತಿವೆ ಎಂದರು.

ಆರೋಗ್ಯ ಇಲಾಖೆ, ಪಶುವೈದ್ಯಕೀಯಲ್ಲಿ ವೈದ್ಯರ ಮತ್ತು ಸಿಬ್ಬಂಧಿಗಳ ಕೊರತೆ ಅಧಿಕವಾಗಿ ಇರುವುದರಿಂದ ಜನತೆ ಹಾಗೂ ಜಾನುವಾರುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿಸೆ ದೊರೆಯುತ್ತಿಲ್ಲ. ದಶದ ಭವಿಷ್ಯವನ್ನು ಭದ್ರಗೊಳಿಸುವ ಶಿಕ್ಷಣ ಇಲಾಖೆಗೆ ಸರ್ಕಾರ ಆದ್ಯತೆಯನ್ನು ನೀಡದಕಾರಣಕ್ಕೆ ಶಿಕ್ಷಕರ ಕೊರತೆ ಅಧಿಕವಾಗಿದೆ ಎಂದು ತಿಳಿಸಿದರು.

ಅಧಿಕ ಮಳೆಗೆ ಹೆಚ್ಚಿನ ಪ್ರಮಾಣದಲ್ಲಿ ಶಾಲಾ ಕಮೊಠಡಿಗಳು ಹಾಳಾಗಿವೆ. ಹಾನಗಲ್ಲ ಕ್ಷೇತ್ರಕ್ಕೆ ಕನಿಷ್ಟ 40 ಕೊಠಡಿಗಳನ್ನಾದರೂ ನೀಡಬೇಕು. ಧರ್ಮ ಗಂಟು ರೋಗದಿಂದ ಈವರೆಗೆ 90 ಜಾನುವಾರುಗಳು ನಿಧನವಾಗಿವೆ. ಪಶುಸಂಗೋಪನಾ ಇಲಾಖೆ ಹೈನುಗಾರಿಕೆಯ ರಾಸುಗಳಿಗೆ ವಿಮೆ ಕುರಿತು ಜಾಗೃತಿ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.

ಹಾಲು ಕೊಡುವ ಜಾನುವಾರುಗಳಿಗೆ ವಿಮೆ ಮಾಡಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. 25 ಸಾವಿರ ವಿಮೆ ಮಾಡಿದರೆ ರೈತರ ವಂತಿಕೆಯಾಗಿ 150 ರೂಗಳನ್ನು ಪಾವತಿಸಬೇಕು. ಇದನ್ನು ಸವಂತ ಕಟ್ಟುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. 50 ಸಾವಿರ ವಿಮೆ ಮಾಡಿಸಿದರೆ ನಾನು 25 ಸಾವಿರ ವಿಮೆ ವಂತಿಕೆಯನ್ನು ನೀಡಿದರೆ ರೈತರಿಂದ 25 ಸಾವಿರ ವಿಮೆ ಮೊತ್ತದ ವಂತಿಕೆಯನ್ನು ನಾನು ಭರಿಸುತ್ತೇನೆ. ಈಗಾಗಲೇ 2 ಸಾವಿರ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.
ತಾಲೂಕಿನಲ್ಲಿ 19 ಸ್ಲಂ ಪ್ರದೇಶಗಳಲ್ಲಿನ ಜನತೆಗೆ ಹಕ್ಕು ಪತ್ರ ನೀಡಿರಲಿಲ್ಲ. ಈ ಕುರಿತು ವಸತಿ ಸಚಿವ ಸೋಮಣ್ಣ ಅವರನ್ನು ಭೇಟಿ ಆಗಿ ಸರ್ವೇ ಆಗಿರುವ ಸ್ಲಂ ಪ್ರದೇಶದಲ್ಲಿನ ಜನತೆಗೆ ಹಕ್ಕು ಪತ್ರ ನೀಡುವುದಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದರು.

ನೀರಾವರಿಗೆ ಸಂಬಂಧಿಸಿದ ಕಾಲುವೆಗಳ ಒತ್ತುವರಿ ತೆರವುಗೊಳಿಸುವುದು, ಕಾಲುವೆಗಳಲ್ಲಿ ಬೆಳೆದಿರುವ ಗಿಡ ಕಂಟೆಗಳನ್ನು ತೆರವು ಮಾಡದ ಹಿನ್ನಲೆಯಲ್ಲಿ ಈ ಬಾರಿ ಹೆಚ್ಚಿನ ಪ್ರವಾಹ ಆಗುವುದಕ್ಕೆ ಕಾರಣವಾಗಿದೆ. ಹೀಗಾಗಿ ಬರುವ ಜನೇವರಿಯಲ್ಲಿ ಈ ಎಲ್ಲ ಕಾರ್ಯಗಳನ್ನು ಉದ್ಯೋಗ ಖಾತರಿ ಯೋಜನೆಯಲ್ಲಿ ಕೈಗೊಳ್ಳುವುದಕ್ಕೆ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ದೇಶದ ಬಹಳ ಜನ ರಾಹುಲ್ ಗಾಂಧಿ ಅವರನ್ನು ಹತ್ತಿರದಿಂದ ನೋಡಿರಲಿಲ್ಲ. ಅವರು ಕೈಗೊಂಡಿರುವ ಭಾರತ್ ಜೋಡೋ ಯಾತ್ರೆ ಬಹಳ ಯಶಸ್ವಿಯಾಗಿದೆ. ಅವರಿಗೆ ದೊಡ್ಡ ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗಿದೆ. ಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಅಧಿಕ ಲಾಭವಾಗಲಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!