ಆರ್ಥಿಕ ಬಿಕ್ಕಟ್ಟು ನಿಭಾಯಿಸಲು ಸರ್ಕಾರಿ ನೌಕರರ ವೇತನದಲ್ಲಿ 10ಶೇ. ಕಡಿತಕ್ಕೆ ಚಿಂತಿಸುತ್ತಿದೆಯಂತೆ ಪಾಕ್‌ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಒಂದೆಡೆ ಉಗ್ರರ ಉಪಟಳ ಇನ್ನೊಂದೆಡೆ ಆರ್ಥಿಕ ಕುಸಿತದಿಂದ ಪಾಕಿಸ್ತಾನದ ಪರಿಸ್ಥಿತಿ ಹದಗೆಟ್ಟಿದ್ದು ಅಕ್ಷರಶಃ ಭಿಕ್ಷೆ ಬೇಡುವ ಪರಿಸ್ಥಿತಿಗೆ ತಲುಪಿದೆ ಎಂದರೆ ತಪ್ಪಾಗಲಾರದು. ಪರಿಸ್ಥಿತಿ ನಿಭಾಯಿಸಲು ಪಾಕಿಸ್ತಾನದ ಶೇಹಬಾಜ್‌ ಶರೀಫ್‌ ಸರ್ಕಾರ ಪರದಾಡುತ್ತಿದ್ದು ನಗದು ಕೊರತೆ ನಿಭಾಯಿಸಲು ಸರ್ಕಾರಿ ಉದ್ಯೋಗಿಗಳ ವೇತನದಲ್ಲಿ 10 ಶೇಕಡಾ ಕಡಿತಗೊಳಿಸಲು ಚಿಂತಿಸುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.

ಪಾಕಿಸ್ತಾನದ ವಿದೇಶಿ ವಿನಿಮಯವು ಕ್ಷೀಣಿಸುತ್ತಿದ್ದುಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪಾಕಿಸ್ತಾನದಿಂದ ಪಾವತಿ ಸಿಗುತ್ತಿಲ್ಲದ ಕಾರಣ ಸೇವೆ ನಿಲ್ಲಿಸುವುದಾಗಿ ಇತ್ತೀಚೆಗಷ್ಟೆ ವಿದೇಶಿ ಹಡಗು ಕಂಪನಿಗಳು ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದವು. ಈಗ ಪಾಕಿಸ್ತಾನವು ಆರ್ಥಿಕ ಬಿಕ್ಕಟ್ಟು ನಿಯಂತ್ರಿಸಲು ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸುತ್ತಿದ್ದು ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಅವರು ರಚಿಸಿರುವ ರಾಷ್ಟ್ರೀಯ ಮಿತವ್ಯಯ ಸಮಿತಿ (ಎನ್‌ಎಸಿ) – ಸರ್ಕಾರಿ ನೌಕರರ ವೇತನವನ್ನು ಮಂಡಳಿಯಾದ್ಯಂತ ಶೇಕಡಾ 10 ರಷ್ಟು ಕಡಿತಗೊಳಿಸುವುದು ಸೇರಿದಂತೆ ವಿವಿಧ ಕ್ರಮಗಳನ್ನು ಪರಿಗಣಿಸುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.

ಇದಲ್ಲದೇ ಸಚಿವಾಯಲಗಳು ಹಾಗೂ ಬೇರೆ ಬೇರೆ ಸರ್ಕಾರಿ ವಿಭಾಗಗಳ ವೆಚ್ಚದಲ್ಲಿಯೂ 15 ಶೇಕಡಾ ಕಡಿತ ಮಾಡಲು ರಾಷ್ಟ್ರೀಯ ಮಿತವ್ಯಯ ಸಮಿತಿ ಯೋಚಿಸುತ್ತಿದೆ. ಇದಲ್ಲದೇ ಮಂತ್ರಿಗಳು, ರಾಜ್ಯ ಸಚಿವರು ಮತ್ತು ಸಲಹೆಗಾರರ ​​ಸಂಖ್ಯೆಯನ್ನು 78 ರಿಂದ 30 ಕ್ಕೆ ಇಳಿಸಲು ಹಾಗೂ ಕೆಲವರಿಗೆ ಪ್ರೋ ಬೋನೋ (ಪಾವತಿಯಿಲ್ಲದೇ) ಕೆಲಸ ಮಾಡುವಂತೆ ಸೂಚಿಸಲು ಕೂಡ ಪಾಕಿಸ್ತಾನ ಚಿಂತಿಸುತ್ತಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!