Wednesday, August 17, 2022

Latest Posts

ಸಚಿವ ಸಂಜಯ್ ರಾಥೋಡ್ ರಾಜೀನಾಮೆ ಅಂಗೀಕರಿಸಿದ ಮಹಾರಾಷ್ಟ್ರ ರಾಜ್ಯಪಾಲರು

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ನಿವಾಸಿ ಪೂಜಾ ಚವಾಣ್ ಸಾವಿನಲ್ಲಿ ಸಚಿವರ ಪಾತ್ರ ಇದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಂಜಯ್ ರಾಥೋಡ್ ಅವರು ಅರಣ್ಯ ಸಚಿವ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ನಾಲ್ಕು ದಿನಗಳ ನಂತರ ಗುರುವಾರ ಅಂಗೀಕರಿಸಿದ್ದಾರೆ.
ರಾಥೋಡ್ ಅವರ ರಾಜೀನಾಮೆ ಅಂಗೀಕರಿಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮಾಡಿದ್ದ ಶಿಫಾರಸನ್ನು ರಾಜ್ಯಪಾಲರಿಗೆ ಅಂಗೀಕರಿಸಿದ್ದು, ಅರಣ್ಯ ಖಾತೆಯ ಉಸ್ತುವಾರಿಯನ್ನು ಸಿಎಂಗೆ ನೀಡಲಾಗಿದೆ ಎಂದು ರಾಜಭವನ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.
ಫೆಬ್ರವರಿ 8 ರಂದು ಪುಣೆಯಲ್ಲಿ ಶವವಾಗಿ ಪತ್ತೆಯಾದ ಬೀಡ್ ಜಿಲ್ಲೆಯ ನಿವಾಸಿ ಪೂಜಾ ಚವಾಣ್(23) ಅವರ ಸಾವಿಗೆ ಶಿವಸೇನಾ ಶಾಸಕ, ಮಾಜಿ ಸಚಿವ ಸಂಜಯ್ ರಾಥೋಡ್ ಅವರು ಕಾರಣ ಎಂದು ಆರೋಪಿಸಲಾಗಿತ್ತು. ಹೀಗಾಗಿ ರಾಥೋಡ್ ಅವರು ಕಳೆದ ಭಾನುವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!