Friday, August 12, 2022

Latest Posts

ಮಹಾ ಬಿಕ್ಕಟ್ಟು: ಎಲ್ಲರ ಚಿತ್ತ ಗುವಾಹಟಿ ಹೊಟೇಲ್‌ನ ತುರ್ತು ಸಭೆಯತ್ತ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಇಂದು ಮಧ್ಯಾಹ್ನ ಬಂಡಾಯ ನಾಯಕ ಏಕನಾಥ್ ಶಿಂಧೆ ಕರೆದಿರುವ ತಮ್ಮ ಬೆಂಬಲಿಗರ ಸಭೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಮಧ್ಯಾಹ್ನ 2 ಗಂಟೆಗೆ ಗುವಾಹಟಿಯ ಹೊಟೇಲ್‌ನಲ್ಲಿ ಬಂಡಾಯ ನಾಯಕ ಏಕನಾಥ್ ಶಿಂಧೆ ಸಭೆ ಕರೆದಿದ್ದು ಈ ಸಭೆಯಲ್ಲಿ ಮುಂದಿನ ನಡೆ ಹಾಗೂ ಕಾರ್ಯತಂತ್ರಗಳ ಕುರಿತು ಅವರು ತಮ್ಮ ಬೆಂಬಲಿಗರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಈ ನಡುವೆ ಬಂಡಾಯ ಶಾಸಕರ ಮೇಲೆ ಹರಿಹಾಯ್ದಿರುವ ಶಿವಸೇನೆ, ಪ್ರತೀ ಶಾಸಕರಿಗೆ 50 ಕೋಟಿ ಆಫರ್ ನೀಡಲಾಗಿದೆಂದು ತನ್ನ ಮುಖವಾಣಿ ಸಾಮ್ನಾದಲ್ಲಿ ವರದಿ ಮಾಡಿದೆ. ಜೊತೆಗೆ ಬಂಡಾಯದ ಹಿಂದೆ ಬಿಜೆಪಿ ಇದೆ ಎಂದು ನೇರ ಆರೋಪವನ್ನೂ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss