ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಯಲ್ಲಿ ವರ ಡ್ಯಾನ್ಸ್ ಮಾಡಿದ್ದಕ್ಕೆ ವಧುವಿನ ತಂದೆ ಮದುವೆಯನ್ನೇ ನಿಲ್ಲಿಸಿದ ವಿಚಿತ್ರ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ.
ಬಾಲಿವುಡ್‌ನ ಒಂದು ಕಾಲದ ಐಟಂ ನಂಬರ್ ಹಾಡಾಗಿರುವ ‘ಚೋಲಿ ಕೇ ಪೀಚೆ ಕ್ಯಾಹೇ’ ಹಾಡು ಯುವಕನೊಬ್ಬ ಬಾಳಲ್ಲಿ ಬಿರುಗಾಳಿ ಎಬ್ಬಿಸಿದ್ದು, ಮದುವೆಯೇ ನಿಂತು ಹೋಗಿದೆ. ಐಟಂ ಹಾಡಿಗೆ ಮಧುಮಗನ ಎರ್ರಾಬ್ರಿರಿ ಡಾನ್ಸ್ ನೊಡಿದ ಮಾವ (ವಧುವಿನ ತಂದೆ) ಮದುವೆಯನ್ನೇ ರದ್ದು ಮಾಡಿದ್ದಾರೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.
ವರದಿಗಳ ಪ್ರಕಾರ ದೆಹಲಿಯಲ್ಲಿ ಮದುವೆ ನಿಗದಿಯಾಗಿತ್ತು, ವರ ತನ್ನ ಬಂಧುಗಳು ಸ್ನೇಹಿತರೊಂದಿಗೆ ಈ ಮದುವೆ ಸಮಾರಂಭಕ್ಕೆ ದಿಬ್ಬಣದ ಮೂಲಕ ಆಗಮಿಸಿದ್ದ. ಈ ವೇಳೆ ವರನ ಸ್ನೇಹಿತರು ವರನಿಗೆ ಡಾನ್ಸ್ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಗೆಳೆಯನ ಮಾತು ಕೇಳಿ ಡಾನ್ಸ್ ಮಾಡಲು ಮುಂದಾದಾಗ ‘ಚೋಲಿ ಕೇ ಪೀಚೆ ಕ್ಯಾಹೆ’ ಹಾಡು ಬಂದಿದ್ದು, ಅಲ್ಲಿದ್ದವರೆಲ್ಲಾ ಜೊತೆಯಾಗಿ ಈ ಹಾಡಿಗೆ ಚೆನ್ನಾಗಿ ಡಾನ್ಸ್ ಮಾಡಿದ್ದಾರೆ.
ಆದರೆ ವಧುವಿನ ತಂದೆಗೆ ಇದ್ಯಾವುದೂ ಇಷ್ಟವಾಗಿಲ್ಲ, ಅವರು ಕೂಡಲೇ ಸಿಟ್ಟಿಗೆದ್ದು ಮದುವೆಯನ್ನೇ ನಿಲ್ಲಿಸಿದ್ದಾರೆ. ವರನ ವರ್ತನೆಯಿಂದ ನಮ್ಮ ಕುಟುಂಬದ ಮೌಲ್ಯಗಳಿಗೆ ಅವಮಾನವಾಗಿದೆ ಎಂದು ಹೇಳಿ ವಧುವಿನ ತಂದೆ ಮದುವೆ ನಿಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಘಟನೆಯಿಂದಾಗಿ ಇತ್ತ ವಧು ಕಣ್ಣೀರಿಟ್ಟರೆ ವರ ಆಕೆಯ ತಂದೆಯ ಮನವೊಲಿಸಲು ಪ್ರಯತ್ನಿಸಿದ್ದಾನೆ. ಇದೆಲ್ಲವೂ ಕೇವಲ ಸಂಭ್ರಮದ ಕ್ಷಣಗಳನ್ನು ಸಂಭ್ರಮಿಸುವುದಕ್ಕಾಗಿ ಆಗಿತ್ತು ಎಂದು ಹೇಳಿದರು ಕೇಳದ ವಧುವಿನ ತಂದೆ ಮದುವೆಯನ್ನು ನಿಲ್ಲಿಸಿದ್ದಾರೆ.
ಈ ಘಟನೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಬೇಗನೆ ವೈರಲ್ ಆಯ್ತು. ಆ ಪೋಸ್ಟ್‌ನಲ್ಲಿ ವರನು ಅತಿಥಿಗಳನ್ನು ರಂಜಿಸಲು ‘ಚೋಲಿ ಕೆ ಪೀಚೆ’ ಹಾಡಿಗೆ ನೃತ್ಯ ಮಾಡುತ್ತಾನೆ. ಆದರೆ ವಧುವಿನ ತಂದೆ ಮದುವೆಯನ್ನೇ ರದ್ದುಗೊಳಿಸುತ್ತಾನೆ ಎಂಬ ಶೀರ್ಷಿಕೆಯಲ್ಲಿ ಸುದ್ದಿ ವೈರಲ್ ಆಗಿತ್ತು. ವೀಡಿಯೋ ನೋಡಿದ ಅನೇಕರು ಹಲವು ವಿಭಿನ್ನ ಕಾಮೆಂಟ್ ಮಾಡಿದ್ದಾರೆ.