ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ನಿನ್ನೆ ಬೆಂಗಳೂರಿನ ಕೊಡಿಗೇಹಳ್ಳಿ ಮೇನ್ ರೋಡ್ ನ ಮೋರ್ ಶೋ ರೂಮ್ ಬಳಿ ಓಡಾಡುತ್ತಿದ್ದ ಜನ ಹೆದರಿ ನಡುಗಿದ್ದಾರೆ. ಇದಕ್ಕೆ ಕಾರಣ ಕತ್ತರಿಸಿದ ಸ್ಥಿಯಲ್ಲಿ ರಸ್ತೆ ಮಧ್ಯೆ ಬಿದ್ದದ್ದ ಕೈ.
ಹೌದು.. ಯಾರೋ ಕಿಡಿಗೇಡಿಗಳು ಕೊಡಿಗೇಹಳ್ಳಿ ಮೇನ್ ರೋಡ್ ನ ಮೋರ್ ಶೋ ರೂಮ್ ಬಳಿ ಕತ್ತರಿಸಿರುವ ಸ್ಥಿತಿಯಲ್ಲಿದ್ದ ಕೃತಕ ಮುಂಗೈಯೊಂದನ್ನು ರಸ್ತೆ ಮಧ್ಯೆ ಎಸೆದಿದ್ದಾರೆ. ಅದೇ ರಸ್ತೆಯಲ್ಲಿ ಓಡಾಡುವ ಜನ ಮುಂಗೈ ಬಿದ್ದಿರುವುದನ್ನು ನೋಡಿ ಗಾಬರಿಗೊಂಡಿದ್ದಾರೆ.
ಕೂಡಲೇ ಗಾಬರಿಯಿಂದ ಜನ ಕೊಡಿಗೇಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರೀಕ್ಷಿಸಿದಾಗ ಅದು ಕೃತಕ ಕೈ ಎಂದು ತಿಳಿದಿದೆ. ಗಾಬರಿಗೊಂಡಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.