ಬೆಂಕಿಗೂ ಜಗ್ಗದ ಪುಸ್ತಕ, ಹರಾಜಿನಲ್ಲಿ ಇದರ ಬೆಲೆ ಎಷ್ಟು ಗೊತ್ತಾ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪುಸ್ತಕಗಳಲ್ಲಿ ಬರೆದಿಟ್ಟ ಅದೆಷ್ಟೋ ಇತಿಹಾಸ, ಘಟನೆಗಳು ಗೆದ್ದಲು, ನೀರು, ಬೆಂಕಿ, ಅಥವಾ ಇತರೆ ಕಾರಣಗಳಿಂದ ನಾಶವಾಗಿವೆ. ಎಷ್ಟು ಬಾರಿ ನಾಶವಾದರೂ ಸಹ ಅಕ್ಷರಗಳು ಪುಟಿದೇಳುತ್ತಲೇ ಇರುತ್ತವೆ. ಪುಸ್ತಕಗಳ ವಿಚಾರವಾಗಿ ಎಷ್ಟೇ ಜಾಗೃತವಾಗಿದ್ದರೂ ಬಹಳ ವರ್ಷಗಳವರೆಗೆ ಅವುಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಮಾರ್ಗರೆಟ್ ಅಟ್‌ ವುಡ್‌ನ ʻದಿ ಹ್ಯಾಂಡ್‌ಮೇಡ್ಸ್ ಟೇಲ್ʼ ಪುಸ್ತಕವನ್ನು ನಾಶ ಮಾಡಲು ಇದೀಗ ಯಾವುದರಿಂದಲೂ ಸಾಧ್ಯವಿಲ್ಲ.

ದಿ ಹ್ಯಾಂಡ್‌ಮೇಡ್ಸ್ ಟೇಲ್ ಬುಕ್ ಅಗ್ನಿ ನಿರೋಧಕ ಪುಸ್ತಕ. ಈ ಪುಸ್ತಕವು ಸಿನೆಫಾಯಿಲ್, ಪ್ರತ್ಯೇಕವಾದ ಅಲ್ಯೂಮಿನಿಯಂ ಮೆಟೀರಿಯಲ್‌ನಿಂದ ಮಾಡಲ್ಪಟ್ಟಿದೆ. 1200 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ ಸುಟ್ಟರೂ ಪುಸ್ತಕಕ್ಕೆ ಏನೂ ಆಗುವುದಿಲ್ಲ. ನಿರ್ದಿಷ್ಟ ಆವೃತ್ತಿಯಲ್ಲಿ ರಚಿಸಲಾದ ವಿಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ 5 ಬಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ಜೊತೆಗೆ ಪುಸ್ತಕದ ಬೆಲೆ ಕೋಟಿ ರೂಪಾಯಿಗೂ ಹೆಚ್ಚಿಗೆ ಹರಾಜಾಗಿದೆ. ಹರಾಜಿನಿಂದ ಬಂದ ಹಣವನ್ನು ಮುಕ್ತ ಅಭಿವ್ಯಕ್ತಿಗಾಗಿ ಕೆಲಸ ಮಾಡುವ ಪೆನ್ ಅಮೆರಿಕಾ ಸಂಸ್ಥೆಗೆ ದಾನ ಮಾಡಲಿದ್ದಾರೆ.

The Handmaid’s Tale ಪುಸ್ತಕಕ್ಕೆ ಸುದೀರ್ಘ ಇತಿಹಾಸ ಇದೆ. 1985 ರಲ್ಲಿ ಬಿಡುಗಡೆಯಾದ ಈ ಪುಸ್ತಕವು ತಲೆಮಾರುಗಳ ದಬ್ಬಾಳಿಕೆಯನ್ನು ಪ್ರಶ್ನಿಸುತ್ತದೆ. ರಿಪಬ್ಲಿಕ್ ಆಫ್ ಗಿಲಿಯಾಡ್ ಎಂದು ಕರೆಯಲ್ಪಡುವ ಕ್ರೂರ ಪಿತೃಪ್ರಧಾನ, ಸ್ತ್ರೀದ್ವೇಷ ಮತ್ತು ದಬ್ಬಾಳಿಕೆಯ ಡಿಸ್ಟೋಪಿಯನ್ ಕಾದಂಬರಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿತ್ತು. ಅತಿ ಹೆಚ್ಚು ಮಾರಾಟವಾದ ಕಾದಂಬರಿ ಎಂಬ ದಾಖಲೆಯನ್ನೂ ಮಾಡಿದೆ. ಈ ಪುಸ್ತಕವನ್ನು ಹಲವಾರು ಬಾರಿ ನಿಷೇಧಿಸಿ, ಸುಟ್ಟರೂ ಸಹ ಈ ಪುಸ್ತಕಕ್ಕಿರುವ ಕ್ರೇಜ್‌ ಮಾತ್ರ ಕಡಿಮೆಯಾಗಿಲ್ಲ. ಓದುಗರ ಅಭಿರುಚಿಯಿಂದ ದೂರ ಸರಿಯದ ಕಾರಣ ಈ ಬಾರಿ ಹೊಸ ಆವೃತ್ತಿಯು ಹೆಚ್ಚು ಸಾಮರ್ಥ್ಯದೊಂದಿಗೆ ಪ್ರಕಟವಾಗಿದೆ. 384 ಪುಟಗಳ ಪುಸ್ತಕ ʻದಿ ಹ್ಯಾಂಡ್‌ಮೇಡ್ಸ್ ಟೇಲ್ʼ ಈಗ ವಿಶ್ವದಾದ್ಯಂತ ಬಿಸಿ ಬಿಸಿ ಚರ್ಚೆಯಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!