ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮನಗರದ ಮಾಗಡಿ ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಮೂರನೇ ಕ್ಲಾಸ್ ವಿದ್ಯಾರ್ಥಿನಿಯಿಂದ ಬಾತ್‌ರೂಂ ತಿಕ್ಕಿಸಲಾಗಿದೆ.
ಬ್ಲೀಚಿಂಗ್ ಪೌಡರ್ ಬಳಸಿ ಬಾತ್‌ರೂಮ್ ತೊಳೆಸಿದ ಕಾರಣ ವಿದ್ಯಾರ್ಥಿನಿ ಅಸ್ವಸ್ಥಳಾಗಿದ್ದಾಳೆ. ಬ್ಲೀಚಿಂಗ್ ಪೌಡರ್ ಜೊತೆಗೆ ಆಸಿಡ್ ನೀಡಿದ್ದು, ಯಾವ ಮಾರ್ಗದರ್ಶನವನ್ನೂ ನೀಡದೆ ಬಾತ್‌ರೂಮ್ ತೊಳೆಯಲು ಹೆಡ್ ಮಾಸ್ಟರ್ ಹೇಳಿದ್ದಾರೆ.
ವಿದ್ಯಾರ್ಥಿನಿ ಶಿಕ್ಷಕರು ಹೇಳಿದಂತೆ ಮಾಡಿ ತರಗತಿಗೆ ವಾಪಾಸ್ ಬಂದಿದ್ದಾಳೆ. ನಂತರ ಏಕಾಏಕಿ ಅಸ್ವಸ್ಥಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳನ್ನು ಶಾಲೆಗೆ ಕಳಿಸುವುದು ಓದಿಸಲು ಬಾತ್‌ರೂಮ್ ತೊಳೆಸಲು ಅಲ್ಲ, ಮುಖ್ಯ ಶಿಕ್ಷಕರನ್ನು ಅಮಾನತು ಮಾಡಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.