1965, 1971ರ ಯುದ್ಧ ದಾಖಲೆಗಳೇ ನ್ಯಾಷನಲ್‌ ಅರ್ಕೈವ್ಸ್‌ ನಲ್ಲಿಲ್ಲ ಯಾಕಂದ್ರೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಭಾರತದ ಹಿಂದಿನ ದಾಖಲೆ-ದಫ್ತರಗಳನ್ನು ಜೋಪಾನ ಮಾಡಲೆಂದೇ ನ್ಯಾಷನಲ್‌ ಅರ್ಕೈವ್ಸ್‌ ಆಫ್‌ ಇಂಡಿಯಾ ಸ್ಥಾಪಿಸಲಾಗಿದೆ. ಆದರೆ ಅದರ ಮುಖ್ಯಸ್ಥರು ಮಾತ್ರ ಬೇರೆಯದೇ ಕಥೆ ಹೇಳುತ್ತಿದ್ದಾರೆ. ನ್ಯಾಷನಲ್‌ ಅರ್ಕೈವ್ಸ್‌ ಆಫ್‌ ಇಂಡಿಯಾದ ಬಳಿ 1962, 1965 ಮತ್ತು 1971 ರ ಯುದ್ಧಗಳು ಮತ್ತು ಹಸಿರು ಕ್ರಾಂತಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಹಲವಾರು ಮುಖ್ಯ ದಾಖಲೆಗಳೇ ಇಲ್ಲ. ಸಚಿವಾಲಯಗಳು ದಾಖಲೆಗಳನ್ನು ಹಂಚಿಕೊಳ್ಳುತ್ತಿಲ್ಲ. ಒಟ್ಟು 151 ಸಚಿವಾಲಯಗಳು ಮತ್ತು ಇಲಾಖೆಗಳಿದ್ದರೆ, ಎನ್‌ಎಐ 36 ಸಚಿವಾಲಯಗಳು ಮತ್ತು ಇಲಾಖೆಗಳು ಸೇರಿದಂತೆ 64 ಏಜೆನ್ಸಿಗಳ ದಾಖಲೆಗಳನ್ನು ಮಾತ್ರ ಪಡೆದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದಿಲ್ಲಿಯಲ್ಲಿ ಆಡಳಿತ ಸುಧಾರಣಾ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ ಆಯೋಜಿಸಿದ್ದ ಉತ್ತಮ ಆಡಳಿತದ ಕಾರ್ಯಾಗಾರದಲ್ಲಿ ನ್ಯಾಷನಲ್‌ ಅರ್ಕೈವ್ಸ್‌ ಆಫ್‌ ಇಂಡಿಯಾ(NAI)ಮುಖ್ಯಸ್ಥ ಚಂದನ್‌ ಸಿನ್ಹಾ ಈ ಕುರಿತು ಮಾತನಾಡಿದ್ದು ಅವರ ಮಾತಿನ ಸಾರಾಂಶವೇನೆಂದರೆ “1993 ರ, ಪಬ್ಲಿಕ್ ರೆಕಾರ್ಡ್ಸ್ ಆಕ್ಟ್ ಪ್ರಕಾರ, ಕೆಲವು ಗೌಪ್ಯ ವರ್ಗೀಕೃತ ಮಾಹಿತಿಯನ್ನು ಹೊರತುಪಡಿಸಿ ವಿವಿಧ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು 25 ವರ್ಷಗಳಿಗಿಂತ ಹೆಚ್ಚು ಹಳೆಯ ದಾಖಲೆಗಳನ್ನು ಎನ್‌ಎಐಗೆ ವರ್ಗಾಯಿಸಬೇಕಾಗುತ್ತದೆ. ಮಾಹಿತಿಗಳನ್ನು ಗೌಪ್ಯತೆಯ ಆಧಾರದಲ್ಲಿ ವರ್ಗೀಕರಿಸುವ ಅಧಿಕಾರ ಆಯಾ ಸಚಿವಾಲಯಗಳಿಗಿದೆ. NAI ದಾಖಲೆಗಳ ಸಂರಕ್ಷಕನಾಗಿದೆ.

ಆದರೆ ಸ್ವಾತಂತ್ರ್ಯದ ನಂತರ NAI ಯೊಂದಿಗೆ ತಮ್ಮ ದಾಖಲೆಗಳನ್ನು ಹಂಚಿಕೊಳ್ಳದ ಹಲವಾರು ಸಚಿವಾಲಯಗಳಿವೆ. ನಾವು ಸಾರ್ವಕಾಲಿಕವಾಘಿ ಹೆಮ್ಮೆಯಿಂದ ಹೊಗಳಿಕೊಳ್ಳುವ ಹಸಿರುಕ್ರಾಂತಿಯ ಬಗೆಗೆ ನಮ್ಮಲ್ಲಿ ಯಾವುದೇ ದಾಖಲೆಗಳಿಲ್ಲ. 1962 ರ ಯುದ್ಧ, 1965 ರ ಯುದ್ಧ ಮತ್ತು 1971 ರ ಯುದ್ಧಗಳ ದಾಖಲೆಗಳೂ NAI ಬಳಿಯಿಲ್ಲ. ಸ್ವಾತಂತ್ರ್ಯದ ನಂತರ 2022 ರ ಆರಂಭದವರೆಗೆ ರಕ್ಷಣಾ ಸಚಿವಾಲಯವು 476 ಕಡತಗಳನ್ನು ಕಳುಹಿಸಿದೆ. 1960 ರವರೆಗಿನ 20,000 ಕಡತಗಳನ್ನು ಈ ವರ್ಷ ವರ್ಗಾಯಿಸಲಾಗಿದೆ. ಹಾಗಾಗಿ ಕಡತಗಳನ್ನು ರೆಕಾರ್ಡಿಂಗ್‌ ಮಾಡುವ ಅಥವಾ ಅವುಗಳ ಧೂಳು ಸ್ವಚ್ಛಗೊಳಿಸುವವರೆಗೂ ಕಾಯುವುದಕ್ಕಿಂತ ಪ್ರತಿ ತ್ರೈಮಾಸಿಕದಲ್ಲಿ ಕಡತಗಳನ್ನು ಹಸ್ತಾಂತರಿಸುವ ಕೆಲಸವಾಗಬೇಕು” ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!