ಹುಬ್ಬಳ್ಳಿಯಲ್ಲಿ ಮತಾಂತರದ ಬಿಸಿ?-ಶಿಕ್ಕಲಿಗಾರ ಸಮಾಜದ ಪ್ರತಿಭಟನೆ ಹೇಳುತ್ತಿರುವ ಕತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಲವಂತವಾಗಿ ಮತಾಂತರಕ್ಕೆ ಒತ್ತಾಯಿಸುತಿದ್ದ ಪ್ರಕರಣವೊಂದು ಹುಬ್ಬಳ್ಳಿಯಲ್ಲಿ ಮುನ್ನೆಲೆಗೆ ಬಂದಿದೆ. ಇದನ್ನು ವಿರೋಧಿಸಿ ಮತಾಂತರಕ್ಕೆ ಪ್ರಯತ್ನಿಸುತ್ತಿರುವ ಕ್ರಿಶ್ಚಿಯನ್‌ ಮತಾಂಧರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಹುಬ್ಬಳ್ಳಿಯ ಶಿಕ್ಕಲಿಗಾರ ಸಮಾಜದವರು ಪೋಲೀಸ್‌ ಠಾಣೆಯೆದುರು ಜಮಾಯಿಸಿ ಪ್ರತಿಭಟನೆ ನಡೆಸಿದ್ದು ಕೆಲ ಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು ಎಂದು ವರದಿಯಾಗಿದೆ.

ಏನಿದು ಘಟನೆ ?

ಶಿಕ್ಕಲಿಗಾರ ಸಮಾಜದವರನ್ನೇ ಗುರಿಯಾಗಿಸಿಕೊಂಡು ಮತಾಂತರದ ಸಂಚು ನಡೆಸಲಾಗುತ್ತಿದೆ. ಕೆಲ ಕ್ರೈಸ್ತ ಪಾದ್ರಿಗಳೂ ಸೇರಿದಂತೆ ಕೆಲವರು ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎಂದು ಶಿಕ್ಕಲಿಗಾರ ಸಮಾಜದ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ಆದರೆ ಇದುವರೆಗೂ ಯಾವುದೇ ಎಫ್‌ಐಆರ್‌ ದಾಖಲಾಗಿಲ್ಲ ಎನ್ನಲಾಗಿದೆ. ಆದರೆ ಈ ಪ್ರಕರಣದಲ್ಲಿ ಗಮನಿಸಬೇಕಾದ ಅಂಶವೆಂದರೆ ದೂರುದಾರನ ಪತ್ನಿಯ ಮೂಲಕ ಮತಾಂತರಕ್ಕೆ ಯತ್ನಿಸಲಾಗಿದೆ ಎನ್ನುವುದು.

ಹೆಂಡತಿಯಿಂದಲೇ ಮತಾಂತರಕ್ಕೆ ಒತ್ತಾಯ

ಲಭ್ಯವಿರುವ ಮಾಹಿತಿಯ ಪ್ರಕಾರ, ದೂರುದಾರನ ಹೆಂಡತಿಯು ಅವನ ಬಳಿ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದು ಇಲ್ಲದಿದ್ದರೆ ಆತನೊಂದಿಗೆ ಜೀವನ ನಡೆಸಲು ಸಾದ್ಯವಿಲ್ಲ. ಮತಾಂತರಗೊಂಡರೆ ಮಾತ್ರ ಒಟ್ಟಿಗೆ ಬಾಳ್ವೆ ನಡೆಸುತ್ತೇನೆ ಎಂದು ಮಹಿಳೆ ಪಟ್ಟುಹಿಡಿದಿದ್ದಾಳೆ. ಇದೇ ವಿಷಯಕ್ಕೆ ಇಬ್ಬರಿಗೂ ಜಗಳವಾಗಿ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದೇ ಆತ ಸಮಸ್ಯೆಯನ್ನು ತನ್ನ ಸಮಾಜದವರ ಗಮನಕ್ಕೆ ತಂದಿದ್ದಾನೆ. ಕೆಲ ಕ್ರಿಶ್ಚಿಯನ್‌ ಪಾದ್ರಿಗಳು ಮತ್ತು ಇತರ ಮತಾಂಧರು ಅವರ ಮಾವನ ಮನೆಗೆ ಬಂದು ಚರ್ಚಿನ ಪ್ರಾರ್ಥನೆಗಳಲ್ಲಿ ಭಾಗವಹಿಸುವಂತೆ ಹೇಳಿದ್ದಾರೆ ಎಂದು ದೂರುದಾರ ಹೇಳಿಕೊಂಡಿದ್ದಾನೆ.

ಇದರಿಂದ ಕುಪಿತಗೊಂಡ ಶಿಕ್ಕಲಿಗಾರ ಸಮಾಜದವರು ಠಾಣೆಯೆದುರು ಪ್ರತಿಭಟನೆ ನಡೆಸಿದ್ದಾರೆ. ಆರ್ಥಿಕವಾಗಿ ದುರ್ಬಲರಾಗಿರುವ ಶಿಕ್ಕಲಿಗಾರ ಸಮಾಜದವರನ್ನೇ ಗುರಿಯಾಗಿಸಿಕೊಳ್ಳಲಾಗಿದೆ ಎಂದೂ ಆರೋಪಿಸಲಾಗಿದೆ. ಮತಾಂಧರು ಸ್ಥಳೀಯ ಮಾಜಿ ರೌಡಿ ಶೀಟರ್‌ ಒಬ್ಬನ ಸಹಾಯದಿಂದ ಹಿಂದೂ ಧರ್ಮದಿಂದ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ ಎಂದೂ ಆರೋಪಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!