56 ವರ್ಷಗಳಲ್ಲಿ ಅತ್ಯಧಿಕ ತಾಪಮಾನ ದೆಹಲಿಯಲ್ಲಿ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 56 ವರ್ಷಗಳಲ್ಲಿ ಅತ್ಯಧಿಕ ತಾಪಮಾನ ದಾಖಲಾಗಿದ್ದು ಗರಿಷ್ಟ 49 ಡಿಗ್ರಿ ಸೆಲ್ಸಿಯಸ್‌ ತಲುಪಿದೆ. 1966 ರಿಂದ ಈಚೆಗೆ ಈ ಪ್ರಮಾಣದಲ್ಲಿ ಉಷ್ಣಾಂಶ ದಾಖಲಾಗುತ್ತಿರುವುದು ಇದೇ ಮೊದಲು ಎನ್ನಲಾಗಿದೆ.

ಹರಿಯಾಣ ಗಡಿಗೆ ಸಮೀಪವಿರುವ ಮುಂಗೇಶ್‌ ಪುರದಲ್ಲಿ ತಾಪಮಾನವು ಗರಿಷ್ಟ 49 ಡಿಗ್ರಿ ದಾಖಲಾಗಿದ್ದು ಅಲ್ಲಿಯೇ ಪಕ್ಕದ ಗುರುಗ್ರಾಮದಲ್ಲಿ 48 ಡಿಗ್ರಿ ದಾಖಲಾಗಿದೆ. ಇನ್ನು ಉಳಿದಂತೆ ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಸೇರಿದಂತೆ ದೇಶದ ಇತರ ಹಲವು ಭಾಗಗಳು ಬಿಸಿಲಿನ ತಾಪಮಾನಕ್ಕೆ ಬಳಲಿ ಬೆಂಡಾಗಿವೆ. ವರದಿಗಳ ಪ್ರಕಾರ ಇಂದಿನಿಂದ ಶಾಖದಲೆಗಳ ಪ್ರಭಾವವು ಕಡಿಯಾಗಬಹುದು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!