Sunday, August 14, 2022

Latest Posts

ಹಿಂದು ಸ್ಮಶಾನ ಭೂಮಿ ಅತಿಕ್ರಮಣ: ಜಾಗಟೆ ಬಾರಿಸಿ ಮೆರವಣಿಗೆ ಮೂಲಕ ಪ್ರತಿಭಟನೆ

ಹೊಸ ದಿಗಂತ ವರದಿ, ಅಂಕೋಲಾ:

ಪಟ್ಟಣದ ಕೋಟೇವಾಡದಲ್ಲಿರುವ ಹಿಂದು ಸ್ಮಶಾನ ಭೂಮಿಯಲ್ಲಿ ನಡೆದಿರುವ ಅತಿಕ್ರಮಣ ತೆರವುಗೊಳಿಸಲು ಸ್ಥಳೀಯ ಪುರಸಭೆ ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಿ ಸ್ಮಶಾನ ಭೂಮಿ ರಕ್ಷಣಾ ಸಮಿತಿ ವತಿಯಿಂದ ಜಾಗಟೆ ಬಾರಿಸಿತ್ತ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಲಾಯಿತು.
ತಾಲೂಕಿನ ಹಿಂದೂ ಧರ್ಮದ ಬಹುತೇಕ ಎಲ್ಲಾ ಸಮಾಜದವರು ಶವ ಸಂಸ್ಕಾರ ಕಾರ್ಯಕ್ಕೆ ಬಳಸುವ ಸ್ಮಶಾನ ಭೂಮಿ ಅತಿಕ್ರಮಣ ತೆರುವು ಗೊಳಿಸಲು ಈ ಹಿಂದೆ ಸಾಕಷ್ಟು ಬಾರಿ ಸಂಬಂಧಿಸಿದವರ ಗಮನಕ್ಕೆ ತಂದರೂ ಅತಿಕ್ರಮಣ ತೆರುವು ಗೊಳಿಸಲು ಹಿಂದೇಟು ಹಾಕುತ್ತಿರುವುದು ಏಕೆ ಎಂದು ಸಮಿತಿಯ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಜಾಗಟೆ ಬಾರಿಸಿ ಗೋವಿಂದಾ ಗೋವಿಂದಾ ಕೂಗುತ್ತಾ ಪುರಸಭೆ ಕಾರ್ಯಾಲಯಕ್ಕೆ ಆಗಮಿಸಿದ ಸ್ಮಶಾನ ರಕ್ಷಣಾ ಸಮಿತಿ
ಸದಸ್ಯರು ಸ್ಮಶಾನ ಭೂಮಿ ಅತಿಕ್ರಮಣದ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದಕ್ಕೂ ಇದುವರೆಗೆ ಸಮರ್ಪಕ ಉತ್ತರ ದೊರಕಿಲ್ಲ
ಕೋಟೇವಾಡ ಸ್ಮಶಾನ ಭೂಮಿ ಅತಿಕ್ರಮಣ ತೆರುವು ಗೊಳಿಸಲು ತಹಶೀಲ್ಧಾರ್ ಅವರು ಪುರಸಭೆಗೆ ಎರಡು ಬಾರಿ ಲಿಖಿತ ಆದೇಶ ನೀಡಿದ್ದಾರೆ ಆದರೂ ಇದುವರೆಗೆ ಅತಿಕ್ರಮಣ ತೆರುವು ಗೊಳಿಸಲಾಗಿಲ್ಲ ಏಕೆ ಎಂದು ಸ್ಮಶಾನ ಭೂಮಿ ರಕ್ಷಣಾ ಸಮಿತಿ ಅಧ್ಯಕ್ಷ ಸುರೇಶ ವೆರ್ಣೇಕರ್ ಪುರಸಭೆ ಅಧಿಕಾರಿಗಳಿಗೆ ಪ್ರಶ್ನಿಸಿದರು.
ಸ್ಮಶಾನ ಭೂಮಿ ಅತಿಕ್ರಮಣ ತೆರುವು ಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸ್ಥಳದಲ್ಲಿ ಉಪಸ್ಥಿತರಿದ್ದ ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ, ಮುಖ್ಯಾಧಿಕಾರಿ ಶೃತಿ ಗಾಯಕವಾಡ್ ಅವರಿಗೆ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಲಾಯಿತು.
ಸ್ಮಶಾನ ರಕ್ಷಣಾ ಸಮಿತಿಯ ಮಾರುತಿ ನಾಯ್ಕ, ಸುರೇಶ ನಾಯ್ಕ,
ಮಂಜುನಾಥ ವಿ. ನಾಯ್ಕ, ಪ್ರಕಾಶ ನಾಯ್ಕ, ಯಶ್ವಂತ ನಾಯ್ಕ, ಉದಯ ನಾಯ್ಕ, ಅಭಿ ಶೇಣ್ವಿ, ನಾಗೇಶ ನಾಯ್ಕ ಮೊದಲಾದವರು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss