ಐತಿಹಾಸಿಕ ವೈರಮುಡಿ ಉತ್ಸವಕ್ಕೆ ಅದ್ದೂರಿ ಚಾಲನೆ: ಮೇಲುಕೋಟೆ ರಾಜಬೀದಿಯಲ್ಲಿ ಮೊಳಗಿದ ಗೋವಿಂದ ನಾಮಸ್ಮರಣೆ

ಹೊಸದಿಗಂತ ವರದಿ, ಮಂಡ್ಯ : ಐತಿಹಾಸಿಕ ಶ್ರೀದೇವಿ, ಭೂದೇವಿಯವರೊಂದಿಗೆ ಗರುಡಾರೂಢನಾದ ಶ್ರೀ ಚೆಲುವನಾರಾಯಣಸ್ವಾಮಿಯ ವೈರಮುಡೀ ಉತ್ಸವ ಶನಿವಾರ ಮೇಲುಕೋಟೆಯ ರಾಜಬೀದಿಯಲ್ಲಿ ಸಹಸ್ರಾರು ಮಂದಿ ಭಕ್ತರ ಗೋವಿಂದನಾಮ ಹರ್ಷೋದ್ಘಾರದ ನಡುವೆ ವಿಜೃಂಭಣೆಯಿಂದ ನೆರವೇರಿತು. ಸಾಕ್ಷಾತ್ ಶ್ರೀಮನ್ನಾರಾಯಣನ ಕಿರೀಟ ಎಂದೇ ನಂಬಿರುವ ವೈರಮುಡಿ ಕಿರೀಟವನ್ನು ಗರುಡಾರೂಢನಾದ ಚೆಲುವನಾರಾಯಣನ ಮುಡಿಗೆ ಅಲಂಕರಿಸಲಾಗಿತ್ತು. ಶ್ರೀದೇವಿ, ಭೂದೇವಿಯವರೊಂದಿಗೆ ಗರುಡಾರೂಢನಾಗಿ ಸ್ವಾಮಿ ಭಕ್ತರಿಗೆ ದರುಶನ ನೀಡಿದರು. ಜಿಲ್ಲಾಧಿಕಾರಿ ಡಾ. ಕುಮಾರ ಅವರು ಸ್ವಾಮಿಗೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ರಾತ್ರಿ ಯಾಗಶಾಲೆ ಮತ್ತು … Continue reading ಐತಿಹಾಸಿಕ ವೈರಮುಡಿ ಉತ್ಸವಕ್ಕೆ ಅದ್ದೂರಿ ಚಾಲನೆ: ಮೇಲುಕೋಟೆ ರಾಜಬೀದಿಯಲ್ಲಿ ಮೊಳಗಿದ ಗೋವಿಂದ ನಾಮಸ್ಮರಣೆ