Saturday, August 13, 2022

Latest Posts

ಭೂಮಿಯಲ್ಲೇ ಅತ್ಯಂತ ಉಷ್ಣಾಂಶ ದಾಖಲಾಗಿದ್ದು, ಕ್ಯಾಲಿಫೋರ್ನಿಯಾದ ಡೆತ್‌ವ್ಯಾಲಿಯಲ್ಲಿ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಸಾವಿನ ಕಣಿವೆ ಎಂದೇ ಕರೆಯುವ ಅಮೆರಿಕದ ಮರುಭೂಮಿ ಪ್ರದೇಶ ಕ್ಯಾಲಿಫೋರ್ನಿಯಾದ ಡೆತ್ ವ್ಯಾಲಿಯಲ್ಲಿ ಭೂಮಿಯಲ್ಲೇ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ಡೆತ್ ವ್ಯಾಲಿಯಲ್ಲಿ ಶನಿವಾರ 54.4  ಡಿಗ್ರಿ ಸೆಲ್ಶಿಯಸ್‌ನಷ್ಟು ಉಷ್ಣಾಂಶ ದಾಖಲಾಗಿದೆ. ಇದುವರೆಗೂ ಇಷ್ಟು ಉಷ್ಣಾಂಶ ಎಲ್ಲಿಯೂ ದಾಖಲಾಗಿಲ್ಲ. ಕಳೆದ ವರ್ಷವೂ ಡೆತ್ ವ್ಯಾಲಿಯಲ್ಲಿಯೇ ಅತ್ಯಂತ ಉಷ್ಣಾಂಶ ದಾಖಲಾಗಿತ್ತು.
ಸದಾ ಬಿಸಿಗಾಳಿಯಿಂದ ಕೂಡಿರುವ ಫರ್ನನ್ಸ್ ಕ್ರೀಕ್ ಪ್ರದೇಶದಲ್ಲಿ ಇರುವ ಡೆತ್‌ವ್ಯಾಲಿಯಲ್ಲಿ ಉಷ್ಣಾಂಶ ಕಡಿಮೆಯಾಗುವುದೇ ಇಲ್ಲ. ರಾತ್ರಿ ವೇಳೆ ಕೂಡ 32 ಡಿಗ್ರಿ ಸೆಲ್ಶಿಯಸ್‌ನಷ್ಟು ಉಷ್ಣಾಂಶ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss