Saturday, April 1, 2023

Latest Posts

ಮುಂದುವರಿದ ಲೋಕಾಯುಕ್ತರ ಬೇಟೆ: ಬಲೆಗೆ ಬಿದ್ದ ಹೆಲ್ತ್ ಇನ್ಸ್​ಪೆಕ್ಟರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ (Lokayukta Raid At Bengaluru) ಮುಂದುವರಿದಿದ್ದು, ಬೆಂಗಳೂರಿನಲ್ಲಿ ಓರ್ವ ಹೆಲ್ತ್ ಇನ್ಸ್​ಪೆಕ್ಟರ್ (Helth Inspector)​ ಅವರ ಮೇಲೆ ಬಲೆ ಬೀಸಿದ್ದಾರೆ.

ಸ್ಪಾ ಲೈಸೆನ್ಸ್​ ನವೀಕರಣಕ್ಕಾಗಿ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಸಿ.ವಿ.ರಾಮನ್​ನಗರದ ಬಿಬಿಎಂಪಿ ಕಚೇರಿಯಲ್ಲಿನ ಹೆಲ್ತ್ ಇನ್ಸ್​​ಪೆಕ್ಟರ್ ರಾಮಯ್ಯ 20,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಲಂಚಕ್ಕೆ ಬೇಡಿಕೆ ಇಟ್ಟ ಬಗ್ಗೆ ಸ್ಪಾ ಮಾಲೀಕರು ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ. ಅದರಂತೆ 20 ಸಾವಿರದ ಹಣದ ಪೈಕಿ 18 ಸಾವಿರ ರೂಪಾಯಿ ನೀಡುತ್ತಿದ್ದ ವೇಳೆ ಸಿ.ವಿ.ರಾಮನ್​ನಗರದ ಬಿಬಿಎಂಪಿ ಕಚೇರಿಗೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ರಾಮಯ್ಯರನ್ನು ಬಂಧಿಸಿದ್ದಾರೆ.
ಸದ್ಯ ಹೆಲ್ತ್ ಇನ್ಸ್ ಪೆಕ್ಟರ್ ರಾಮಯ್ಯರನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು ವಿಚಾರಣೆ ಆರಂಭಿಸಿದ್ದು, ಭ್ರಷ್ಟಾಚಾರ ತಡೆಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!