Tuesday, March 28, 2023

Latest Posts

ಪತ್ನಿ ಶವವನ್ನು ಹೆಗಲಮೇಲೆ ಹೊತ್ತು ಕಿಲೋಮೀಟರ್‌ಗಟ್ಟಲೆ ನಡೆದ ಪತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿ ಮೃತಪಟ್ಟಿದ್ದು, ಪತ್ನಿಯ ಶವವನ್ನು ಹೆಗಲ ಮೇಲೆ ಹೊತ್ತ ಪತಿ ಕಿಲೋಮೀಟರ್‌ಗಟ್ಟಲೆ ನಡೆದಿದ್ದಾರೆ.

ನಬ್ರಂಗಾಪುರದ ಕೋರಪುಟ್ ನಿವಾಸಿ ಪಂಗಿ ತನ್ನ ಪತ್ನಿ ಗುರುಳನ್ನು ಹೆಗಲ ಮೇಲೆ ಹೊತ್ತು ನಡೆದಿದ್ದಾರೆ. ವಿಶಾಖಪಟ್ಟಣಂನ ಆಸ್ಪತ್ರೆಗೆ ಪತ್ನಿಯನ್ನು ಕರೆದೊಯ್ದಿದ್ದು, ವೈದ್ಯರು ಆಕೆ ಬದುಕುಳಿಇಯುವುದಿಲ್ಲ ಮನೆಗೆ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ.

100 ಕಿ. ಮೀ ದೂರ ಇದ್ದ ಊರಿಗೆ ತೆರಳಲು ಪತಿ ಆಟೋ ಒಂದನ್ನು ಬುಕ್ ಮಾಡಿದ್ದಾರೆ. ಆಟೋದಲ್ಲಿ ತೆರಳುತ್ತಿದ್ದ ಮಾರ್ಗಮಧ್ಯೆ ಪತ್ನಿ ಮೃತಪಟ್ಟಿದ್ದು, ಆಟೋ ಚಾಲಕ ಶವದ ಜತೆ ಪ್ರಯಾಣಿಸುವುದಕ್ಕೆ ಒಪ್ಪಲಿಲ್ಲ. ನಡುರಸ್ತೆಯಲ್ಲಿ ವ್ಯಕ್ತಿಯನ್ನು ಕೆಳಗಿಳಿಸಿದ್ದಾರೆ.

ಬಿಸಿಲಿನಲ್ಲಿ ಮಾರ್ಗಮಧ್ಯೆ ನಿಲ್ಲಿಸಿದ್ದರಿಂದ ಬೇರೆ ಯಾವ ವಾಹನವೂ ಸಿಗದೆ ಪತ್ನಿಯನ್ನು ಹೆಗಲ ಮೇಲೆ ಹೊತ್ತು ನಡೆದಿದ್ದಾರೆ. ಸ್ಥಳೀಯರು ಇದನ್ನು ಗಮನಿಸಿದ್ದು,ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ಆಂಬುಲೆನ್ಸ್ ಅರೇಂಜ್ ಮಾಡಿ ಹಳ್ಳಿಗೆ ಕಳುಹಿಸಿದ್ದಾರೆ. ಸಮಯ ಹಾಗೂ ಸಹಾಯ ಮಾಡಿದ್ದಕ್ಕೆ ಪಂಗಿ ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!