ಮತ್ತೆ ಒಂದಾಗಿ ಬಾಳೋಣ ಅಂತಾ ಕೇಳಲು ಹೋಗಿ ಪತ್ನಿ ಮನೆಯಲ್ಲೇ ಪತಿ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ನಾಗರಭಾವಿಯ ಎನ್​ಜಿಎಫ್​ ಲೇಔಟ್​ನ ಅಪಾರ್ಟ್‌ಮೆಂಟ್​ನಲ್ಲಿ ಪತ್ನಿ ಮನೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಪತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ.

ಮಂಜುನಾಥ್ (39) ಆತ್ಮಹತ್ಯೆ ಮಾಡಿಕೊಂಡ ಪತಿ. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಕ್ಯಾಬ್ ಡ್ರೈವರ್ ಆಗಿದ್ದ ಮಂಜುನಾಥ್ 2013 ರಲ್ಲಿ ನಯನ ಮದುವೆಯಾಗಿದ್ದ. ದಂಪತಿಗೆ 9 ವರ್ಷದ ಮಗ ಕೂಡ ಇದ್ದಾನೆ. ಆದರೆ ಗಂಡ-ಹೆಂಡತಿ ನಡುವೆ ಆಗಾಗ ಜಗಳವಾಗುತ್ತಿತ್ತು. ಈ ಹಿನ್ನೆಲೆ ದಂಪತಿ ಡಿವೋರ್ಸ್ ಮೊರೆ ಹೋಗಿದ್ದರು. 2022 ಕ್ಕೆ ಡಿವೋರ್ಸ್​ಗೆ ಅಪ್ಲೈ ಮಾಡಿದ್ದರು.

ಈ ಮಧ್ಯೆ ಹೆಂಡತಿಯ ಬಳಿ ಡಿವೋರ್ಸ್ ಬೇಡ ಎಂದಿದ್ದ ಮಂಜುನಾಥ್, ಮತ್ತೆ ಒಂದಾಗಿ ಬಾಳೋಣ ಅಂತಾ ಕೇಳಲು ಎನ್​ಜಿಎಫ್ ಲೇಔಟ್​ನಲ್ಲಿರುವ ಹೆಂಡತಿ ಮನೆಗೆ ಬಂದಿದ್ದರು. ಹೆಂಡತಿ ವಾಸವಿದ್ದ ಮನೆ ಬಳಿ 8 ಗಂಟೆಗೆ ಮಂಜುನಾಥ್ ತೆರಳಿದ್ದು, ನೀನೆಷ್ಟು ಹಿಂಸೆ ಕೊಟ್ಟಿದ್ದೀಯಾ, ಹೊಡೆದಿದ್ದೀಯಾ ನಾನು ಬರಲ್ಲವೆಂದು ನಯನ ಹೇಳಿದ್ದಾರೆ. ಈ ವೇಳೆ ನಡೆದ ಜಗಳದಿಂದ ಪೆಟ್ರೋಲ್ ತಂದು ಮಂಜುನಾಥ್ ಬೆಂಕಿ ಹಚ್ಚಿಕೊಂಡಿದು ಆತ್ಮಹತ್ಯೆ ಮಾಡಿದ್ದಾರೆ.

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!