ಹೊಸದಿಗಂತ ಆನ್ಲೈನ್ ಡೆಸ್ಕ್:
ಜನರು ಕೆಲವೊಮ್ಮೆ ವಿಚಿತ್ರ ಕಾರಣಗಳಿಗೆ ದಾಂಪತ್ಯ ಜೀವನ ಕೊನೆಗಾಣಿಸುತ್ತಾರೆ.
ಇದಕ್ಕೆ ನೂತನ ಉದಾಹರಣೆ ಇಲ್ಲಿದೆ.. ಅಲಿಗಢದ ವ್ಯಕ್ತಿ ತನ್ನ ಪತ್ನಿ ಪ್ರತಿದಿನ ಸ್ನಾನ ಮಾಡೋದಿಲ್ಲ ಎನ್ನುವ ಕಾರಣಕ್ಕೆ ತ್ರಿವಳಿ ತಲಾಖ್ ನೀಡಿದ್ದಾನೆ.
ತನ್ನ ಪತಿಯಿಂದ ದೂರಾಗಲು ಇಷ್ಟಪಡದ ಪತ್ನಿ ಮಹಿಳಾ ಸಂರಕ್ಷಣಾ ಕೋಶಕ್ಕೆ ದೂರು ನೀಡಿದ್ದು, ವಿಷಯ ಬೆಳಕಿಗೆ ಬಂದಿದೆ.
ನನಗೆ ವಿಚ್ಛೇದನ ಬೇಡ, ಗಂಡನೊಡನೆ ಸಂತಸದ ಜೀವನ ನಡೆಸಲು ಇಚ್ಛಿಸುತ್ತೇನೆ ಎಂದು ಮಹಿಳೆ ಹೇಳಿದ್ದಾರೆ.
ಪತಿಯ ಜೊತೆ ಮಹಿಳಾ ಸಂರಕ್ಷಣಾ ಕೋಶದ ಸಲಹೆಗಾರರು ಮಾತನಾಡಿದ್ದು, ಮದುವೆ ಉಳಿಸಿಕೊಳ್ಳುವಂತೆ ಮಾತನಾಡಿದ್ದಾರೆ.
ಈ ದಂಪತಿ ಎರಡು ವರ್ಷದ ಹಿಂದೆ ವಿವಾಹವಾಗಿದ್ದು, ಒಂದು ವರ್ಷದ ಮಗು ಇದೆ. ಇದೀಗ ತಲಾಖ್ ನೀಡಿದರೆ ಮಗುವಿನ ಪಾಲನೆಗೂ ಕಷ್ಟವಾಗುತ್ತದೆ. ಅಲ್ಲದೆ ಇದೊಂದು ಕ್ಷುಲ್ಲಕ ಕಾರಣ. ಇದನ್ನು ನಾವೇ ಮಾತನಾಡಿ ಸರಿಪಡಿಸಿಕೊಳ್ಳಬಹುದು ಎಂದು ಮಹಿಳೆ ಹೇಳಿದ್ದಾರೆ. ಇವರಿಬ್ಬರಿಗೂ ತಮ್ಮ ತಪ್ಪು ಸುಧಾರಿಸಿಕೊಳ್ಳಲು ಹಾಗೂ ವಿಚ್ಛೇದನದ ಬಗ್ಗೆ ಇನ್ನೊಮ್ಮೆ ಯೋಚಿಸಲು ಸಮಯ ನೀಡಲಾಗಿದೆ.