ಮಗಳು ಕಪ್ಪು ಎಂದು ಹೆಂಡತಿಯನ್ನೇ ಕೊಂದ ಪತಿ: ಮಗುವಿನಿಂದ ಬಯಲಾಯಿತು ತಾಯಿಯ ಕೊಲೆ ರಹಸ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ವ್ಯಕ್ತಿಯೋರ್ವ ತಮ್ಮ ಮಗಳು ಕಪ್ಪಾಗಿ ಹುಟ್ಟಿರುವ ಕುರಿತ ಶಂಕೆ ಮೇರೆಗೆ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದು ಘಟನೆ ಬೆಳಕಿಗೆ ಬಂದಿದೆ.

ಮೊದಲಿಗೆ ಈ ಮಹಿಳೆಯದ್ದು ಸಹಜ ಸಾವು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಎರಡೂವರೆ ವರ್ಷದ ಮಗು ನೀಡಿದ ಮಾಹಿತಿ ಕಹಾನಿಯನ್ನೇ ಬದಲಾಯಿಸಿದೆ.

ಒಡಿಶಾದ ಉಮ್ಮರ್‌ಕೋಟ್​ನ ಸಿಲಾಟಿಗಾಂವ್ ಗ್ರಾಮದ ಮಾಣಿಕ್ ಘೋಷ್ ಎಂಬಾತ ಏಳು ವರ್ಷಗಳ ಹಿಂದೆ ಕರಗಾಂವ್ ಗ್ರಾಮದ ಲಿಪಿಕಾ ಮಂಡಲ್ (22) ಎಂಬುವರನ್ನು ಮದುವೆಯಾಗಿದ್ದರು. ಮದುವೆಯ ನಂತರ ಇಬ್ಬರೂ ಉದ್ಯೋಗಕ್ಕಾಗಿ ಆಂಧ್ರಪ್ರದೇಶದ ಕಾಕಿನಾಡಕ್ಕೆ ವಲಸೆ ಬಂದಿದ್ದರು. ಎರಡೂವರೆ ವರ್ಷಗಳ ಹಿಂದೆ ಈ ದಂಪತಿಗೆ ಮಾಹಿ ಎಂಬ ಹೆಣ್ಣು ಮಗು ಹುಟ್ಟಿತ್ತು.ಆದರೆ, ತಮ್ಮ ಮಗಳು ಕಪ್ಪಾಗಿದ್ದಾಳೆ ಎಂದು ಪತ್ನಿ ಲಿಪಿಕಾ ಮೇಲೆ ಆರಂಭದಿಂದಲೂ ಮಾಣಿಕ್‌ ಅನುಮಾನ ಪಡುತ್ತಿದ್ದನಂತೆ. ಇದೇ ವಿಚಾರವಾಗಿ ದಂಪತಿ ನಡುವೆ ಹಲವು ಬಾರಿ ಜಗಳ ನಡೆದಿತ್ತು. ಈ ವರ್ಷದ ಆರಂಭದಲ್ಲಿ ಮತ್ತೆ ಜಗಳವಾಗಿದ್ದರಿಂದ ಲಿಪಿಕಾ ತನ್ನ ತವರು ಮನೆಗೆ ಬಂದಿದ್ದರು. ಇದಾದ ನಂತರ ಜೂನ್‌ನಲ್ಲಿ ರಾಜಿ ಮಾಡಿ ಲಿಪಿಕಾ ಅವರನ್ನು ಪತಿಯೊಂದಿಗೆ ಕಾಕಿನಾಡಕ್ಕೆ ಕಳುಹಿಸಲಾಗಿತ್ತು.ಇದೇ ತಿಂಗಳ 18ರಂದು ರಾತ್ರಿ ಲಿಪಿಕಾಗೆ ಮೂರ್ಛೆ ಬಂದಿದ್ದಾರೆ ಎಂದು ಮಾಣಿಕ್ ಸ್ನೇಹಿತರ ಸಹಾಯದಿಂದ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಇಷ್ಟರಲ್ಲೇ ಲಿಪಿಕಾ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಆದರೆ, ಲಿಪಿಕಾ ಕುತ್ತಿಗೆಯಲ್ಲಿ ಗಾಯದ ಗುರುತುಗಳನ್ನು ಪತ್ತೆಯಾಗಿವೆ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಕಾಕಿನಾಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಾಗಾಗಿ ಅನುಮಾನಾಸ್ಪದ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡ ಬಳಿಕ ಲಿಪಿಕಾರ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು.
ಬಳಿಕ ಲಿಪಿಕಾ ಪೋಷಕರು ಮಂಗಳವಾರ ಕಾಕಿನಾಡಕ್ಕೆ ಬಂದು ಮಗು ಮಾಹಿಯನ್ನು ತಮ್ಮೂರಿಗೆ ಕರೆದುಕೊಂಡು ಹೋಗಿದ್ದಾರೆ. ಆಗಲೇ ಲಿಪಿಕಾ ಸಾವಿನ ಸತ್ಯ ಬಹಿರಂಗವಾಗಿದೆ.

ಲಿಪಿಕಾ ಪೋಷಕರೊಂದಿಗೆ ಬಂದ ಆ ಮಗು ತನ್ನ ತಾಯಿಯ ಸಾವಿನ ಕ್ಷಣವನ್ನು ಅಜ್ಜನಿಗೆ ವಿವರಿಸಿದೆ. ‘ನನ್ನ ತಂದೆ ಅಮ್ಮನ ಗಂಟಲನ್ನು ಎರಡೂ ಕೈಗಳಿಂದ ಹೀಗೆ ಹಿಡಿದು.. ಗಟ್ಟಿಯಾಗಿ ಒತ್ತಿ. ಅಮ್ಮನ ಕೈ ಕಾಲುಗಳು ಬಹಳ ಹೊತ್ತು ನಡುಗುತ್ತಿದ್ದವು. ಸ್ವಲ್ಪ ಹೊತ್ತಿನ ನಂತರ ಕದಲದೆ ಮಲಗಿದಳು ಎಂದು ಪುಟ್ಟ ಮಗು ತನ್ನದೇ ಆದ ಮಾತುಗಳಲ್ಲಿ ಹೇಳಿದೆ.

ಮೊಮ್ಮಗಳು ತನ್ನ ಗಂಟಲಿನ ಮೇಲೆ ಕೈಗಳನ್ನು ಇಟ್ಟು ಹಾಗೂ ಇತರ ಸನ್ನೆಗಳೊಂದಿಗೆ ತೋರಿಸಿದಾಗ ಅಜ್ಜನಿಗೆ ಅನುಮಾನ ಬಂದಿದೆ. ಅಲ್ಲಿಯವರೆಗೂ ಮಗಳು ಪ್ರಜ್ಞೆ ತಪ್ಪಿ ಸತ್ತಿದ್ದಾಳೆ ಎಂದುಕೊಂಡಿದ್ದ ಅವರಿಗೆ ಅಳಿಯನೇ ಮಗಳನ್ನು ಕೊಂದಿದ್ದಾನೆ ಎಂಬುದು ಅರ್ಥವಾಗಿದೆ. ಅಂತೆಯೇ, ಶನಿವಾರ ಮಗುವನ್ನು ಕರೆದುಕೊಂಡು ಉಮ್ಮರ್‌ಕೋಟ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ.

ಆಗ ಉಮ್ಮರ್‌ಕೋಟ್ ಠಾಣೆ ಪೊಲೀಸರು ಕಾಕಿನಾಡ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿ ಮಾಣಿಕ್ ಘೋಷ್​ನನ್ನು ಬಂಧಿಸಿದ್ದಾರೆ. ಅಲ್ಲದೇ, ಮಗು ಕಪ್ಪಾಗಿ ಹುಟ್ಟಿದೆ ಎಂದು ಕಾರಣಕ್ಕೆ ಪತ್ನಿಯನ್ನು ಕೊಂದಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!