ಕೆಲವೇ ತಿಂಗಳಲ್ಲಿ ಬದಲಾಗುತ್ತಿವೆ ತಂಬಾಕು ಉತ್ಪನ್ನ ಪ್ಯಾಕೆಟ್ ಮೇಲಿನ ಚಿತ್ರಗಳು!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲಿನ ಹಳೆಯ ಚಿತ್ರ ಬದಲಾಗುತ್ತಿದ್ದು, 2022 ಡಿಸೆಂಬರ್ 1ರ ಬಳಿಕ ತಯಾರಿಸುವ, ಆಮದು ಮಾಡಿದ ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ತಂಬಾಕು ಸೇವನೆ ಅತ್ಯಂತ ನೋವಿನ ಸಾವಿಗೆ ಕಾರಣವಾಗುತ್ತದೆ ಎಂಬ ಎಚ್ಚರಿಕೆಯ ಸಾಲುಗಳ ಜೊತೆ ಹೊಸ ಚಿತ್ರ ಕಾಣಿಸಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ಈ ಹೊಸ ಚಿತ್ರವು ಮುಂದಿನ ಒಂದು ವರ್ಷದ ಅವಧಿಗೆ ಮಾನ್ಯವಾಗಿರುತ್ತದೆ ಎಂದಿದೆ. ಇದಲ್ಲದೆ, ಸಚಿವಾಲಯದ ಹೊಸ ಆರೋಗ್ಯ ಎಚ್ಚರಿಕೆಗಳ ಪ್ರಕಾರ, 2023 ಡಿಸೆಂಬರ್ 1ರ ಬಳಿಕ ತಯಾರಿಸಲಾದ, ಆಮದು ಮಾಡಿದ ಅಥವಾ ಪ್ಯಾಕ್ ಮಾಡಲಾದ ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ತಂಬಾಕು ಬಳಕೆದಾರರು ಕಿರಿಯ ವಯಸ್ಸಿನಲ್ಲೇ ಸಾಯುತ್ತಾರೆ ಎಂಬ ಎಚ್ಚರಿಕೆಯ ಸಾಲುಗಳೊಂದಿಗೆ ಚಿತ್ರವನ್ನು ಪ್ರದರ್ಶಿಸಲಾಗುತ್ತದೆ.

ಸಚಿವಾಲಯವು 2022 ಜುಲೈ 21 ರಂದು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ಪ್ಯಾಕೇಜಿಂಗ್ ಮತ್ತು ಲೇಬಲಿಂಗ್) ನಿಯಮಗಳು, 2008ರ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಹೊಸ ಆರೋಗ್ಯ ಎಚ್ಚರಿಕೆ ಸಾಲುಗಳನ್ನು ಅಳವಡಿಸಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!