ಫೈಟರ್ ಜೆಟ್‌ಗಳ ಪತನ: ಆಂತರಿಕ ತನಿಖೆಗೆ ಆದೇಶಿಸಿದ ಭಾರತೀಯ ವಾಯುಪಡೆ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಧ್ಯಪ್ರದೇಶದಲ್ಲಿ ಎರಡು ಯುದ್ಧ ವಿಮಾನಗಳು ಪತನಗೊಂಡಿರುವ ಬಗ್ಗೆ ಭಾರತೀಯ ವಾಯುಪಡೆ ಆಂತರಿಕ ತನಿಖೆಗೆ ಆದೇಶಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಾಯುಪಡೆ ಮುಖ್ಯಸ್ಥರಾದ ಅನಿಲ್ ಚೌಹಾಣ್ ಮತ್ತು ಐಎಎಫ್ ಚೀಫ್ ಮಾರ್ಷಲ್ ಚೌಧರಿ ಅವರಿಗೆ ಕರೆ ಮಾಹಿತಿ ಪಡೆದಿದ್ದಾರೆ. ವಾಯುಪಡೆಯ ಪೈಲಟ್‌ಗಳ ಯೋಗಕ್ಷೇಮ ವಿಚಾರಿಸಿದರು.

ಮಧ್ಯಪ್ರದೇಶದ ನಿರ್ಜನ ಅರಣ್ಯಗಳಲ್ಲಿ ಎರಡು ಯುದ್ಧ ವಿಮಾನಗಳು ಪತನಗೊಂಡಿದ್ದರಿಂದ ಭಾರತೀಯ ವಾಯುಪಡೆಗೆ ದೊಡ್ಡ ಹೊಡೆತ ಬಿದ್ದಿದೆ. ಮಧ್ಯಪ್ರದೇಶದಲ್ಲಿ ತರಬೇತಿ ಪಡೆಯುತ್ತಿದ್ದ ಎರಡು ಯುದ್ಧ ವಿಮಾನಗಳು ಇಂದು ಪತನಗೊಂಡಿವೆ. ಸುಖೋಯ್-30 ಮತ್ತು ಮಿರಾಜ್ ವಿಮಾನಗಳು ಮಧ್ಯಪ್ರದೇಶದ ಮೊರೆನಾ ಬಳಿ ಪತನಗೊಂಡಿವೆ. ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳು ತಾಂತ್ರಿಕ ದೋಷದಿಂದ ಪತನಗೊಂಡಿವೆಯೇ? ಅಥವಾ ಬೇರೆ ಕಾರಣಗಳಿವೆಯೇ? ಇದು ತಿಳಿದು ಬರಬೇಕು.

ಎರಡು ಯುದ್ಧ ವಿಮಾನಗಳು ಪತನಗೊಂಡಿರುವುದು ಕೂಡ ಸಂಚಲನ ಮೂಡಿಸಿದೆ. ಎರಡು ಸುಖೋಯ್-30 ಮತ್ತು ಮಿರಾಜ್ ಯುದ್ಧ ವಿಮಾನಗಳು ಮಧ್ಯಪ್ರದೇಶದ ಮೊರೆನಾ ಬಳಿ ಪತನಗೊಂಡಿವೆ. ರಕ್ಷಣಾ ತಂಡಗಳು ಮಧ್ಯಪ್ರದೇಶದಲ್ಲಿ ಅಪಘಾತದ ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯಾಚರನೆ ನಡೆಸುತ್ತಿವೆ. ಓರ್ವ ಪೈಲೆಟ್‌ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಇಂದು ಮುಂಜಾನೆ 5.30ಕ್ಕೆ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ಪೈಲಟ್‌ಗಳು ಸುಖೋಯ್-30 ವಿಮಾನದಿಂದ ಸುರಕ್ಷಿತವಾಗಿ ಹೊರಬಂದಿದ್ದು, ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!