ತಾಪಮಾನ ರಕ್ಷಣೆಗೆ ಬರ್ತಿದೆ ಭಾರತೀಯ ಅಂಟಾರ್ಟಿಕ್ ಮಸೂದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂಟಾರ್ಕ್ಟಿಕ್ ಒಪ್ಪಂದ ಮತ್ತು ಅಂಟಾರ್ಕ್ಟಿಕ್ ಸಾಗರ ಸಂಪನ್ಮೂಲಗಳ ಸಂರಕ್ಷಣೆಯ ಪರಿಸರ ಸಂರಕ್ಷಣೆಯ ಶಿಷ್ಟಾಚಾರದಲ್ಲಿ (ಮ್ಯಾಡ್ರಿಡ್ ಪ್ರೋಟೋಕಾಲ್) ನರೇಂದ್ರ ಮೋದಿ ನೇತೃತ್ವದ ಸರ್ಕಾರವು ತೆಗೆದುಕೊಂಡ ಒಂದು ದೊಡ್ಡ ಹೆಜ್ಜೆಯೇ ಭಾರತೀಯ ಅಂಟಾರ್ಕ್ಟಿಕ್ ಮಸೂದೆ.

ಅಂಟಾರ್ಕ್ಟಿಕಾದಲ್ಲಿ ಭಾರತದ ಚಟುವಟಿಕೆಗಳಿಗೆ ಸಾಮರಸ್ಯದ ನೀತಿ ಮತ್ತು ನಿಯಂತ್ರಕ ಚೌಕಟ್ಟನ್ನು ರಚಿಸುವ ಉದ್ದೇಶವನ್ನು ಹೊಂದಿದೆ. ಮುಖ್ಯವಾಗಿ ಅಂಟಾರ್ಕ್ಟಿಕ್ ಪ್ರದೇಶದಲ್ಲಿ ಭಾರತ ಸ್ಥಾಪಿಸಿದ ಸಂಶೋಧನಕಾ ಕೇಂದ್ರಗಳಿಗೆ ದೇಶದ ಕಾನೂನುಗಳನ್ನು ವಿಸ್ತರಿಸಲು ಗಮನ ನೀಡಲಾಗಿದೆ. ಸದ್ಯ ದೇಶ ಮೈತ್ರಿ ಮತ್ತು ಭಾರ್ತಿ ಈ ಎರಡು ಸಕ್ರಿಯ ಸಂಶೋಧನಾ ಕೇಂದ್ರಗಳನ್ನು ಹೊಂದಿದೆ. ಮಸೂದೆಯು, ಭಾರತೀಯ ಅಂಟಾರ್ಕ್ಟಿಕ್ ಕಾರ್ಯಕ್ರಮದ ದಕ್ಷ ಮತ್ತು ಪರಿಣಾಮಕಾರಿ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡಲಿದೆ. ಅಲ್ಲದೆ, ಅಂಟಾರ್ಕ್ಟಿಕ್‌ನಲ್ಲಿ ಪ್ರವಾಸೋದ್ಯಮ ಮತ್ತು ಮೀನುಗಾರಿಕೆ ಸಂಪನ್ಮೂಲಗಳ ಸುಸ್ಥಿರ ಅಭಿವೃದ್ಧಿಯ ನಿರ್ವಹಣೆಯಲ್ಲಿ ಭಾರತದ ಆಸಕ್ತಿ ಮತ್ತು ಸಕ್ರಿಯ ಒಳಗೊಳ್ಳುವಿಕೆಗೆ ಅನುಕೂಲವಾಗುತ್ತದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹೇಳಿದೆ.

ಏನಿದು ಅಂಟಾರ್ಕ್ಟಿಕ್ ಮಸೂದೆ ?

ಉಳಿದೆಲ್ಲ ಖಂಡಗಳಿಗೆ ಹೋಲಿಸಿದರೆ, ಅಂಟಾರ್ಕ್ಟಿಕಾದಲ್ಲಿ ಹವಾಮಾನ ತ್ವರಿತ ಬದಲಾವಣೆಗಳಾಗುತ್ತಿದೆ. ಜಾಗತಿಕ ತಾಪಮಾನ ಅಲ್ಲಿನ ಹಿಮನದಿಗಳ ಕರಗುವಿಕೆಗೆ ಕಾರಣವಾಗುತ್ತಿದೆ. ಹವಾಮಾನದ ಮೇಲಾಗುತ್ತಿರುವ ಈ ಬದಲಾವಣೆಗಳು ಪ್ರಪಂಚದಾದ್ಯಂತ ಆತಂಕ ಮೂಡಿಸಿದ್ದು, ಸಾಕಷ್ಟು ಹವಾಮಾನ ಪ್ರಭಾವ ಬೀರುವ ಸಾಧ್ಯತೆಗಳಿವೆ. ಇದೇ ವೇಳೆ ಜಾಗತಿಕ ತಾಪಮಾನ ನಿಯಂತ್ರಿಸು ವುದಕ್ಕಾಗಿ ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಪೂರೈಸಲು ಜಾಗತಿಕ ರಾಷ್ಟ್ರಗಳು ಗಮಹರಿಸಿವೆ. ಈ ಸಂದರ್ಭದಲ್ಲಿ ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಭಾರತ ತನ್ನ ಪಾತ್ರ ಹೆಚ್ಚಿಸಲು ಮುಂದಾಗಿದೆ. ಅಲ್ಲದೆ, ಲೋಕಸಭೆಯಲ್ಲಿ ಅಂಗೀಕರಿಸಲ್ಪಟ್ಟ ಹೊಸ ಮಸೂದೆಯು ಅಂಟಾರ್ಕ್ಟಿಕಾದ ಹದಗೆಟ್ಟ ಪರಿಸರ ವ್ಯವಸ್ಥೆ ರಕ್ಷಿಸಲು ಕ್ರಮಗಳನ್ನು ರೂಪಿಸಲು ಭಾರತಕ್ಕೆ ದಾರಿ ಮಾಡಿಕೊಡಲು ಅವಕಾಶ ನೀಡಲಿದೆ. ಲೋಕಸಭೆಯಲ್ಲಿ ಕಳೆದ ವಾರ ಅಂಗೀಕಾರಗೊಂಡಿರುವ ಭಾರತೀಯ ಅಂಟಾರ್ಕ್ಟಿಕ್ ಮಸೂದೆ 2022, ಗಣಿಗಾರಿಕೆ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ತೊಡೆದುಹಾಕುವುದರೊಂದಿಗೆ ಪ್ರದೇಶವನ್ನು ಮಿಲಿಟರಿ-ಮುಕ್ತಗೊಳಿಸುವ ಗುರಿಯನ್ನು ಹೊಂದಿದೆ. ಜತೆಗೆ ಪ್ರದೇಶದಲ್ಲಿ ಯಾವುದೇ ಪರಮಾಣು ಪರೀಕ್ಷೆಗಳು ಅಥವಾ ಸ್ಫೋಟಗಳು ನಡೆಯದಂತೆ ನೋಡಿಕೊಳ್ಳುವ ಬಗ್ಗೆಯೂ ಭಾರತ ಗಮನ ನೀಡಲಿದೆ ಎಂದು ಭೂ ವಿಜ್ಞಾನ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!