Friday, August 12, 2022

Latest Posts

ಈವರೆಗೆ 70 ದೇಶಗಳಿಗೆ ತಲುಪಿದೆ ಭಾರತೀಯ ಕೊರೋನಾ ಲಸಿಕೆ: ಪ್ರಧಾನಿ ಮೋದಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೋರೋನಾ ಸೋಂಕಿನ ಸಮಯದಲ್ಲಿ ಭಾರತವು, ದೇಶೀಯ ಹೋರಾಟದ ಜೊತೆಗೆ ವಿಶ್ವದ ಅಗತ್ಯತೆಗಳನ್ನು ನೋಡಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಫಿನ್ಲಾಂಡ್‌ ಪ್ರಧಾನಿ ಸನ್ನಾ ಮರಿನ್ ಅವರೊಂದಿಗೆ ಮಾತುಕತೆಯ ನಡೆಸಿದ ಪ್ರಧಾನಿ, ಭಾರತದಲ್ಲಿ ತಯಾರಾದ 58 ದಶಲಕ್ಷಕ್ಕೂ ಹೆಚ್ಚಿನ ಲಸಿಕೆ ಇತ್ತೀಚಿನ ದಿನಗಳಲ್ಲಿ ಸುಮಾರು 70 ದೇಶಗಳನ್ನು ತಲುಪಿದೆ ಎಂದರು.
ಭಾರತ ಮತ್ತು ಫಿನ್ಲ್ಯಾಂಡ್ ಎರಡೂ ರಾಷ್ಟ್ರಗಳು ಪಾರದರ್ಶಕ, ಮಾನವೀಯ ಮತ್ತು ಪ್ರಜಾಪ್ರಭುತ್ವದ ಜಾಗತಿಕ ಕ್ರಮವನ್ನು ನಂಬಿವೆ. ತಂತ್ರಜ್ಞಾನ, ನಾವೀನ್ಯತೆ, ಶುದ್ಧ ವಿದ್ಯುತ್‌ ಶಕ್ತಿ, ಪರಿಸರ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಉಭಯ ದೇಶಗಳು ಬಲವಾದ ಸಹಕಾರವನ್ನು ಹೊಂದಿವೆ ಎಂದು ಕೊಂಡಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss