ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಒಂದು ವರ್ಷದ ನಂತ್ರ ಸಿಕ್ತು ಕೆರೆಯಲ್ಲಿ ಬಿದ್ದದ್ದ ಐಫೋನ್: ಮೊಬೈಲ್ ಆನ್ ಮಾಡಿದವನಿಗೆ ಕಾದಿತ್ತು ಶಾಕ್!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೈ ತಪ್ಪಿ ಮೊಬೈಲ್ ನೀರಿದ್ದ ಬಕೆಟ್ ಲ್ಲಿ ಬಿದ್ದು, ತಕ್ಷಣ ಎತ್ತಿದರೂ ಅದು ಹಾಳಾಗಿರುತ್ತದೆ. ಅದೇ ಕೆರೆಯಲ್ಲಿ ಮೊಬೈಲ್ ಬಿದ್ದರೆ ಏನಾಗಬೇಡ? ಮೊಬೈಲ್ ಹಾಳಾಗುವುದು ಹಾಗಿರಲಿ, ಸಿಗುವುದೇ ಇಲ್ಲ.

ಆದರೆ ಇಲ್ಲೊಬ್ಬ ತೈವಾನ್​ ನಿವಾಸಿಯ ಅದೃಷ್ಟ ಚೆನ್ನಾಗಿದೆ.  ಒಂದು ವರ್ಷದ ಹಿಂದೆ ಕೆರೆಯಲ್ಲಿ ಬಿದ್ದಿದ್ದ ಮೊಬೈಲ್ ಸಿಕ್ಕಿದೆ. ಮತ್ತೊಂದು ಮಜಾ ಅಂದ್ರೆ ಆ ಫೋನ್ ಈಗಲೂ ಚಾಲ್ತಿಯಲ್ಲಿದೆ. ಇದನ್ನು ನೋಡಿ ಆ ಮೊಬೈಲ್ ಮಾಲೀಕ ಚೆನ್​ ಆಶ್ಚರ್ಯಚಕಿತರಾಗಿದ್ದಾರೆ.

ಅಷ್ಟಕ್ಕೂ ನಡೆದಿದ್ದೇನು ಗೊತ್ತಾ.. ತೈಲವಾನ್ ನಲ್ಲಿ ನೀರಿಗೆ ಬರಗಾಲ. ಎಲ್ಲೋ ಕೆಲ ಕಡೆ ಮಾತ್ರ ನೀರು ಇರುತ್ತದೆ. ಇಂತಹ ನೀರು ಹೊಂದಿದ್ದ ಕೆರೆಗೆ ಹೋದಾಗ ಅವರ ಐಫೋನ್  ಬಿದ್ದು ಹೋಗಿದೆ. ಎಷ್ಟು ಹುಡುಕಿದರೂ ಸಿಗಲಿಲ್ಲವೆಂದು ಅದರ ಆಸೆಯನ್ನೇ ಬಿಟ್ಟಿದ್ದರು

ಆದರೆ ಮೊನ್ನೆ ಆತ ಅದೇ ಕೆರೆಯ ಸಮೀಪ ಹೋದಾಗ ಬರಗಾಲದಿಂದ ಕೆರೆ ಸಂಪೂರ್ಣ ಬತ್ತಿರುವುದು ಕಾಣಿಸಿತು.  ಅಚ್ಚರಿ ಎಂದರೆ ಮೇಲ್ಭಾಗದಲ್ಲಿ  ಐಫೋನ್​ ಕಾಣಿಸಿತು. ಸರಿಯಾಗಿ ಚೆಕ್ ಮಾಡಿ ನೋಡಿದಾಗ ಅದು ಆತದೇ ಐಫೋನ್ ಆಗಿತ್ತು. ಆನ್ ಮಾಡಿ ನೋಡಿದರೆ ಮೊಬೈಲ್ ಚಾಲ್ತಿಯಲ್ಲಿಯೇ ಇತ್ತು.

ವರ್ಷದ ಹಿಂದೆ ಕಳೆದು ಹೋಗಿದ್ದ ಮೊಬೈಲ್ ಮತ್ತೆ ಸಿಕ್ಕ ಖುಷಿಯನ್ನು ಆತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಭಾರಿ ವೈರಲ್ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss