ಪಠ್ಯಪುಸ್ತಕ ಪರಿಷ್ಕರಣೆ ವಿಚಾರ: ಎಡಪಂಥೀಯರ ಆಕ್ರಮಣಕ್ಕೀಗ ಬಿಜೆಪಿ ಪಾಳಯದಿಂದ ಉತ್ತರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜ್ಯವ್ಯಾಪಿ ಚರ್ಚೆಗಳು ನಡೆಯುತ್ತಿದ್ದು ನೂತನವಾಗಿ ರೋಹಿತ್‌ ಚಕ್ರತೀರ್ಥ ಅವರ ನೇತೃತ್ವದ ಸಮಿತಿಯು ಪರಿಷ್ಕರಿಸಿದ ಪಠ್ಯ ಪುಸ್ತಕಗಳ ವಿರುದ್ಧವಾಗಿ ಎಡಪಂಥೀಯರು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ಧಾರೆ. ಕುವೆಂಪುರವರಿಗೆ ಅವಮಾನ, ಹೆಡ್ಗೇವಾರ್‌ ವಿಷಯ ಸೇರ್ಪಡೆ, ಟಿಪ್ಪುವನ್ನು ಕೈಬಿಡಲಾಗಿದೆ ಎಂದೆಲ್ಲ ಇಲ್ಲ ಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ.

ಹೊಸ ಪರಿಷ್ಕರಣೆಯಲ್ಲೇನಿದೆ, ಯಾವ್ಯಾವ ವಿಷಯಗಳನ್ನು ಸೇರಿಸಲಾಗಿದೆ ಏನೆಲ್ಲ ಬದಲಾವಣೆಗಳನ್ನು ಮಾಡಲಾಗಿದೆ ಎಂಬುದರ ಕುರಿತು ಗಮನ ಹರಿಸದೇ ಕೇವಲ ವಿರೋಧಿಸಬೇಕು ಎಂಬಕಾರಣಕ್ಕೆ ಕೇಸರೀಕರಣ, ಬ್ರಾಹ್ಮಣ ಪಠ್ಯ ಎಂದೆಲ್ಲ ಬೊಬ್ಬೆ ಹೊಡೆಯಲಾಗುತ್ತಿದೆ. ಇದಕ್ಕೆ ತಕ್ಕ ಪ್ರತ್ಯುತ್ತರವನ್ನು ಕೂಡ ಕೊಡಲಾಗುತ್ತಿದ್ದು ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ, ನವರಸ ನಾಯಕ ಜಗ್ಗೇಶ್‌, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್‌ ಸೇರಿದಂತೆ ಟ್ವೀಟರ್‌ ನಲ್ಲಿ ತೀಕ್ಷ್ಣವಾಗಿ ಉತ್ತರಿಸಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!