ಕಾಶ್ಮೀರದಲ್ಲಿ ನಡೆದ ನರಮೇದದ ನೈಜ ಘಟನೆಯ ಆಧಾರಿತ ಚಿತ್ರ ‘ದಿ ಕಾಶ್ಮೀರ್ ಫೈಲ್ಸ್’: ಚಂದು ಪಾಟೀಲ್

ಹೊಸದಿಗಂತ ವರದಿ,ಕಲಬುರಗಿ:

1989-90 ದಶಕದಲ್ಲಿ ಬಾರತದ ಅವಿಭಾಜ್ಯ ಅಂಗವಾದ ಕಾಶ್ಮೀರದಲ್ಲಿ ನಡೆದ ನರಮೇದದ ನೈಜ ಘಟನೆಯ ಆಧಾರಿತ ಚಿತ್ರ “ದಿ ಕಶ್ಮೀರ್ ಫೈಲ್ಸ್” ಆಗಿದೆ ಎಂದು ಬಿಜೆಪಿ ಯುವ ಮುಖಂಡ,ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ್ ತಿಳಿಸಿದ್ದಾರೆ.

ಅವರು ಮಂಗಳವಾರ ಕಲಬುರಗಿ ನಗರದ ಮಿರಾಜ್ ಮತ್ತು ಶೆಟ್ಟಿ ಸಿನೆಮಾ ಮಂದಿರದಲ್ಲಿ 2000 ಸಾವಿರ ಜನರಿಗೆ ಉಚಿತವಾಗಿ ದಿ ಕಶ್ಮೀರ್ ಫೈಲ್ಸ್ ಚಿತ್ರ ನೋಡಲು ವ್ಯವಸ್ಥೆ ಕಲ್ಪಿಸಿ ,ಬಳಿಕ ಮಾತನಾಡಿ, ಕಾಶ್ಮೀರದ ಹಿಂದೂಗಳ ಮೇಲೆ ಹಾಗೂ ಕಾಶ್ಮೀರದ ಪಂಡಿತರ ಮೇಲೆ ನಡೆದಂತಹ ನರಮೇದವೂ ನಿಜಕ್ಕೂ ದುಖ್ಖದ ಸಂಗತಿಯಾಗಿದೆ. ಕಾಶ್ಮೀರದಲ್ಲಿ ನಡೆದಂತಹ ಹೇಯ ಕೃತ್ಯವೂ, ಮೂರು ದಶಕಗಳ ನಂತರ ಜನರ ಮುಂದೆ ಚಿತ್ರದ ಮೂಲಕ ಬಂದಿದ್ದು, ಎಲ್ಲರೂ ತಪ್ಪದೆ ಈ ಚಿತ್ರ ವನ್ನು ವಿಕ್ಷಣೆ ಮಾಡಬೇಕು ಎಂದರು. ಇದರ ಜೊತೆಗೆ ಚಿತ್ರದ ನಿದೇ೯ಶಕರಾದ ವಿವೇಕ ಅಗ್ನಿಹೋತ್ರಿ ಅವರಿಗೆ ಧನ್ಯವಾದಗಳು ತಿಳಿಸಿದರು.

ಬಿಜೆಪಿ ನಗರ ಅಧ್ಯಕ್ಷ ಸಿದ್ದಾಜಿ ಪಾಟೀಲ್ ಮಾತನಾಡಿ, 90,ರ ದಶಕದಲ್ಲಿ ಕಾಶ್ಮೀರಿ ಹಿಂದೂಗಳ ಮೇಲೆ ನಡೆದಂತಹ ಘಟನೆ ಅತ್ಯಂತ ಕರಾಳವಾದ ಘಟನೆಯಾಗಿದೆ. ಅಂದಿನ ಫಾರೂಕ್ ಅಬ್ದುಲ್ಲಾ ಸರಕಾರ ಹಾಗೂ ಕೇಂದ್ರದಲ್ಲಿ ಆಡಳಿತವಿದ್ದ ಕಾಂಗ್ರೆಸ್ ಸಕಾ೯ರ ಕಾಶ್ಮೀರಿ ಪಂಡಿತರಿಗೆ, ಆಲ್ಲಿಯ ನಿವಾಸಿಗಳಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ವಿಫಲವಾಗಿವೆ ಎಂದು ದೂರಿದರು.

ಅಂದಿನ ಕಾಂಗ್ರೆಸ್ ಸಕಾ೯ರದ ಅವಧಿಯಲ್ಲಿ ಕಾಶ್ಮೀರದ ಪಂಡಿತರು ನೋವುಗಳೊಂದಿಗೆ ಕಾಶ್ಮೀರವನ್ನು ಬಿಟ್ಟು, ರೆಫ್ಯೂಜಿ ಕ್ಯಾಂಪಗಳಲ್ಲಿ ಬಂದು ವಾಸವಾಗಿದ್ದರು.ಕಾಶ್ಮೀರದಲ್ಲಿ ಬೆಂಕಿ ಹತ್ತಿ,ಹಾಡು ಹಗಲೆ ನರಮೇದ ನಡೆಯುತ್ತಿದ್ದರು,ಚಕಾರವೆತ್ತದೆ ಇರುವುದು ಆಂದಿನ ಸರಕಾರದ ನಾಚಿಗೇಡಿತನವಾಗಿದೆ ಎಂದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಉಮೇಶ್ ಪಾಟೀಲ್, ಹಿರಿಯ ಮುಖಂಡ ಮಲ್ಲಿಕಾರ್ಜುನ ಖೇಮಜಿ,ಮಲ್ಲಿಕಾರ್ಜುನ ಓಕಳಿ, ವಿದ್ಯಾಸಾಗರ ಕುಲಕರ್ಣಿ, ಶಿವಾನಂದ ಪಿಸ್ತಿ, ಶಿವಾನಂದ ಬಂಡಕ,ಶಿವಲಿಂಗ ಹಳಿಮನಿ,ಚನ್ನವೀರ ಲಿಂಗನವಾಡಿ, ಚನ್ನು ಚಪ್ಪರಬಂಡಿ,ಕೃಷ್ಣ ನಾಯಕ,ದಿಗಂಬರ ಮಾಗಣಗರಿ, ಸಚಿನ ಕಡಗಂಚಿ ಸೇರಿದಂತೆ ಹಲವರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!