ಬಾಕ್ಸ್ ಆಫೀಸ್‌ನಲ್ಲಿ ‘ಕಾಶ್ಮೀರ್’ ಸುನಾಮಿ: ಕೊಚ್ಚಿಹೋಗುತ್ತಿದೆ ‘ಸ್ಟಾರ್’ಗಳ ದಾಖಲೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಿರೀಕ್ಷೆಯಂತೆಯೇ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ.
ಐದು ದಿನಗಳ ಚಿತ್ರದ ಗಳಿಕೆಯನ್ನು ‘ಸುನಾಮಿ’ ಎಂದು ಬಣ್ಣಿಸಿದ್ದಾರೆ ಟ್ರೇಡ್ ಅನಾಲಿಸಿಸ್ಟ್ ತರಣ್ ಆದರ್ಶ್.

ಮೊದಲ ದಿನ ಕೇವಲ 3.55 ಕೋಟಿ ರೂ. ಗಳಿಸಿದ್ದ ಈ ಚಿತ್ರ, ನಂತರದ ನಾಲ್ಕು ದಿನಗಳ ಕಲೆಕ್ಷನ್ ಬರೋಬ್ಬರಿ 60.20 ಕೋಟಿ ರೂಪಾಯಿ!
ಬಾಲಿವುಡ್‌ನ ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲುಗೊಳಿಸಿರುವ ‘ಫೈಲ್ಸ್’ ಬಾಲಿವುಡ್‌ನ ‘ಸ್ಟಾರ್’ ನಟರ ಚಿತ್ರಗಳ ದಾಖಲೆಯಲ್ಲೂ ಚಿಂದಿ ಮಾಡಿದೆ. ಇಷ್ಟೇ ಅಲ್ಲ, ದೇಶಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಐದನೇ ದಿನ ಈ ಚಿತ್ರದ ಗಳಿಕೆ ಬರೋಬ್ಬರಿ 18 ಕೋಟಿ ರೂಪಾಯಿ.
ಪ್ರಸಿದ್ಧ ನಟ ಅನುಪಮ್ ಖೇರ್, ಪಲ್ಲವಿ ಜೋಶಿ, ವಿಥುನ್ ಚರ್ಕವರ್ತಿ, ಪುನೀತ್ ಇಸ್ಸಾರ್, ದರ್ಶನ್ ಕುಮಾರ್ ಮೊದಲಾದವರು ಪ್ರಧಾನ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಿತ ಅನೇಕ ರಾಜಕೀಯ ಗಣ್ಯರು ಮೆಚ್ಚುಗೆ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!