ಕೇರಳದ 32,000 ಮಹಿಳೆಯರ ಮತಾಂತರ, ಭಯೋತ್ಪಾದನೆ ವಿಚಾರವುಳ್ಳ ʼದಿ ಕೇರಳ ಸ್ಟೋರಿʼ ಚಿತ್ರದ ಮೇಲೆ ದೂರು ದಾಖಲಿಸಲು ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕೇರಳ ರಾಜ್ಯವನ್ನು ಭಯೋತ್ಪಾದಕರ ಸುರಕ್ಷಿತ ತಾಣವೆಂದು ಬಿಂಬಿಸಿದ ಆರೋಪದ ಮೇಲೆ “ದಿ ಕೇರಳ ಸ್ಟೋರಿ” ಚಿತ್ರದ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸುವಂತೆ ಕೇರಳದ ಪೊಲೀಸ್ ಮಹಾನಿರ್ದೇಶಕ ಅನಿಲ್ ಕಾಂತ್ ಅವರು ತಿರುವನಂತಪುರಂ ಪೊಲೀಸ್ ಆಯುಕ್ತ ಸ್ಪರ್ಜನ್ ಕುಮಾರ್ ಅವರಿಗೆ ಸೂಚಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಚಿತ್ರದ ಟೀಸರ್ ನಲ್ಲಿ, ದಕ್ಷಿಣ ರಾಜ್ಯ ಕೇರಳದಲ್ಲಿ 32,000 ಕ್ಕೂ ಹೆಚ್ಚು ಮಹಿಳೆಯರನ್ನು ಮತಾಂತರಗೊಳಿಸಲಾಗಿದೆ. ಮತ್ತು ಅವರಲ್ಲಿ ಹೆಚ್ಚಿನವರನ್ನು ಒಂದು ದಶಕದಲ್ಲಿ ಸಿರಿಯಾ ಮತ್ತು ಅಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಹಿಡಿತದ ಪ್ರದೇಶಗಳಿಗೆ ಕರೆದೊಯ್ಯಲಾಗಿದೆ ಎಂದು ಹೇಳಲಾಗಿದೆ. ಚಿತ್ರವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದಾರೆ ಮತ್ತು ವಿಎ ಶಾ ನಿರ್ಮಿಸಿದ್ದಾರೆ.
ಎರಡು ದಿನಗಳ ಹಿಂದೆ, ತಮಿಳುನಾಡು ಮೂಲದ ಪತ್ರಕರ್ತ ಬಿಆರ್ ಅರವಿಂದಾಕ್ಷನ್ ಅವರು ದೇಶದ ಚಲನಚಿತ್ರ ಸೆನ್ಸಾರ್ ಮಂಡಳಿಯ ಮುಖ್ಯಸ್ಥ ಪ್ರಸೂನ್ ಜೋಶಿ ಮತ್ತು ಇತರರಿಗೆ ಪತ್ರ ಬರೆದು‌, ಈ ಚಿತ್ರದಲ್ಲಿ ಹೇಳಲಾದ ವಿಚಾರಗಳ ನೈಜತೆ ಸಾಬೀತುಪಡಿಸಲು ನಿರ್ಮಾಪಕರು ಸಾಕಷ್ಟು ಪುರಾವೆಗಳನ್ನು ಒದಗಿಸದ ಹೊರತು ಚಲನಚಿತ್ರವನ್ನು ನಿಷೇಧಿಸುವಂತೆ ಕೋರಿದ್ದರು.
ದೂರಿನ ಪ್ರತಿಯನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೂ ಕಳುಹಿಸಲಾಗಿದ್ದು, ನಂತರ ಅದನ್ನು ಡಿಜಿಪಿಗೆ ರವಾನಿಸಿದ್ದಾರೆ. “ದಿ ಕೇರಳ ಸ್ಟೋರಿ” ಚಿತ್ರದ ನಿರ್ದೇಶಕ ಸುದೀಪ್ತೋ ಸೇನ್ ಅವರಿಗೆ ಕರೆ ಮಾಡಿ  ಟೀಸರ್‌ನ ಸತ್ಯಾಸತ್ಯತೆಯನ್ನು ತನಿಖೆ ಮಾಡುವಂತೆ ನಾನು ಕೇರಳ ಸಿಎಂ ಮತ್ತು ಡಿಜಿಪಿಗೆ ಮೇಲ್ ಕಳುಹಿಸಿದ್ದೇನೆ” ಎಂದು ಅರವಿಂದಾಕ್ಷನ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ನಂತರ ಸಿಎಂಗೆ ಪತ್ರ ಬರೆದಿರುವ ಅವರು, ಈ ಸಿನಿಮಾ ದೇಶದ ಏಕತೆ ಮತ್ತು ಸಮಗ್ರತೆಗೆ ವಿರುದ್ಧವಾಗಿದ್ದು, ಗುಪ್ತಚರ ಸಂಸ್ಥೆಗಳಿಗೂ ಕಳಂಕ ತರಲಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ & ಬಿ (ವಿವಿಧ ಗುಂಪುಗಳ ನಡುವೆ ಭಿನ್ನಾಭಿಪ್ರಾಯ ಮತ್ತು ದ್ವೇಷವನ್ನು ನಂಬಿಕೆಯ ಆಧಾರದ ಮೇಲೆ ಉತ್ತೇಜಿಸುವುದು) ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೇಳಿದರು.
ಈ ಚಿತ್ರವು ಉತ್ತರ ಕೇರಳದಿಂದ ಕಾಣೆಯಾದ ನಾಲ್ವರು ಮಹಿಳೆಯರ ಕಥೆಯನ್ನು ಆಧರಿಸಿದೆ ಎಂದು ವರದಿಯಾಗಿದೆ. ಅವರ ಗಂಡಂದಿರ ಮರಣವು ವರದಿಯಾದ ನಂತರ ೀ ಮಹಿಳೆಯರನ್ನು ಅಫ್ಘಾನಿಸ್ತಾನ ಜೈಲುಗಳಲ್ಲಿ ಪತ್ತೆಹಚ್ಚಲಾಯಿತು. ಎರಡು ವರ್ಷಗಳ ಹಿಂದೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅವರನ್ನು ದೇಶಕ್ಕೆ ಹಿಂತಿರುಗಿಸಲು ಅನುಮತಿ ನಿರಾಕರಿಸಿತ್ತು.
ಕೇರಳದ ಶಾಲಿನಿ ಉನ್ನಿಕೃಷ್ಣನ್ ಅಲಿಯಾಸ್ ಫಾತಿಮಾ ಬಾ ಎಂದು ಗುರುತಿಸಿಕೊಂಡಿರುವ ಮುಸುಕು ಧರಿಸಿರುವ ಮಹಿಳೆಯೊಬ್ಬರು “ರಾಜ್ಯದಿಂದ ಮತಾಂತರಗೊಂಡ 32,000 ಮಹಿಳೆಯರಲ್ಲಿ ನಾನೂ ಒಬ್ಬಳು. ಮತ್ತು ನಂತರ ಇಸ್ಲಾಮಿಕ್ ಸ್ಟೇಟ್‌ಗಾಗಿ ಹೋರಾಡಲು ನನ್ನನ್ನು ಸಿರಿಯಾ ಮತ್ತು ಯೆಮೆನ್‌ಗೆ ಕಳುಹಿಸಿದರು” ಎಂದು ಹೇಳುವುದನ್ನು ಟೀಸರ್ ತೋರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!