Sunday, August 14, 2022

Latest Posts

ಯಾರಿಗೂ ಒಳಬರಲು ಬಿಡದೇ ಬಾಗಿಲಲ್ಲಿ ಕುಳಿತ ಬೆಕ್ಕು, ಕುತ್ತಿಗೆ ಹಿಡಿದು ಎಳೆದೊಯ್ದ ಶ್ವಾನ: ನಗುವರಳಿಸುವ ದೃಶ್ಯ ವೈರಲ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇದೊಂದು ಮನಸೆಳೆಯುವ ವಿಡಿಯೋ. ಮುದ್ದಾದ ಬೆಕ್ಕಿನ ಮರಿ ಮತ್ತು ಶ್ವಾನದ ಅಪೂರ್ವ ಸ್ನೇಹದ ದೃಶ್ಯವಿದು. ಇದೀಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದರೆ ನಿಮ್ಮ  ಮನಸ್ಸು ಖುಷಿಯಿಂದ ಪುಟಿಯುವುದು ಗ್ಯಾರೆಂಟಿ.

ಹೌದು.. ಬೆಕ್ಕೊಂದು ಬಾಗಿಲಲ್ಲಿ ಅಡ್ಡವಾಗಿ ನಿಂತು ಜನರಿಗೆ ಒಳಗೆ ಬರಲು ತಡೆಯುತ್ತಿರುತ್ತದೆ. ಆಗ ಶ್ವಾನ ಅಲ್ಲಿಗೆ ಬಂದು ಪರಿಸ್ಥಿತಿಯನ್ನು ನಿಭಾಯಿಸಿರುವ ದೃಶ್ಯವಿದು. ಸಿಸಿಟಿವಿಯಲ್ಲಿ ಸೆರೆಯಾದ ಈ ದೃಶ್ಯ ಈಗ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ವಿಡಿಯೋದಲ್ಲಿ ಏನಿದೆ?

39 ಸೆಕೆಂಡಿನ ಈ ವಿಡಿಯೋವನ್ನು @humor and animals ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಮಳಿಗೆಯ ಬಾಗಿಲಲ್ಲಿ ಕುಳಿತಿರುವ ಕಪ್ಪು-ಬಿಳಿ ಬಣ್ಣದ ಮುದ್ದಾದ ಬೆಕ್ಕು ಯಾರಿಗೂ ಒಳಗೆ ಪ್ರವೇಶಿಸಲು ಕೊಡುತ್ತಿರುವುದಿಲ್ಲ. ಜನರು ಕೂಡ ಬೆಕ್ಕಿಗೆ ದಾರಿ ಬಿಡುವಂತೆ ಪ್ರೀತಿಯಿಂದ ಕೇಳಿಕೊಳ್ಳುತ್ತಾರೆ. ಆದರೆ ಬೆಕ್ಕು ಅದಕ್ಕೆಲ್ಲ ಬಗ್ಗುವುದಿಲ್ಲ.

ಇತ್ತ ಮಳಿಗೆ ಮಾಲಕಿ ಸಿಸಿಟಿವಿಯಲ್ಲಿ ಬೆಕ್ಕಿನ ಚೇಷ್ಟೆ ನೋಡಿ, ತನ್ನ ಶ್ವಾನಕ್ಕೆ ಬೆಕ್ಕನ್ನು ಕರೆ ತರುವಂತೆ ಹೇಳುತ್ತಾಳೆ. ಒಡತಿಯ ಮಾತಿನಂತೆ ಶ್ವಾನ ಬೆಕ್ಕನ್ನು ಜಾಗರೂಕತೆ ಮತ್ತು ಕಾಳಜಿಯಿಂದ ಕಚ್ಚಿ ಒಳಗೆ ಎಳೆದು ತಂದಿದೆ.

ಶ್ವಾನ ಕಚ್ಚಿ ಎಳೆತರುತ್ತಿದ್ದರೆ ಬೆಕ್ಕು ಯಾವುದೇ ರೋಷ ಪ್ರತಿಕ್ರಿಯೆ ನೀಡದೆ ಸುಮ್ಮನೆ ಇರುತ್ತದೆ. ಇಲ್ಲಿ ಬೆಕ್ಕು ಮತ್ತು ಶ್ವಾನದ ಸ್ನೇಹ ಎಷ್ಟು ಗಾಢವಾಗಿದೆ ಎಂಬುದು ತಿಳಿಯುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss