ವರ್ಷದಿಂದ ಭೀತಿ ಹುಟ್ಟಿಸಿದ್ದ ಚಿರತೆ ಕೊನೆಗೂ ಬೋನಿಗೆ

ದಿಗಂತ ವರದಿ ವಿಜಯಪುರ:

ಜಾನುವಾರುಗಳನ್ನು ಬೇಟೆಯಾಡುತ್ತ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದ ಗಂಡು ಚಿರತೆ ಬೋನಿಗೆ ಬಿದ್ದಿರುವ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಣಬೂರ ಗ್ರಾಮದಲ್ಲಿ ನಡೆದಿದೆ.

ಕಳೆದ ಒಂದು ವರ್ಷದಿಂದ ಇಲ್ಲಿನ ಕಣಬೂರ, ಸುತಗುಂಡಿ, ದೇವರಗೆಣ್ಣೂರ, ಬಬಲಾದಿ, ಗುಣದಾಳ ಚಿಕ್ಕಗಲಗಲಿ ಭಾಗದ ಕಬ್ಬಿನ ಹೊಲದಲ್ಲಿ ಓಡಾಡುತ್ತ, ಕುರಿಮರಿ, ನಾಯಿಮರಿಗಳನ್ನು ತಿನ್ನುತ್ತ ಚಿರತೆ ಆತಂಕ ಮೂಡಿಸಿತ್ತು.

ಈ ಚಿರತೆ ಸೆರೆಗಾಗಿ, ಅರಣ್ಯಾಧಿಕಾರಿಗಳು ಸೆರೆ ಹಿಡಿಯಲು ಹರಸಾಹಸಪಟ್ಟು 50 ಸ್ಥಳದಲ್ಲಿ ಬೋನು ಬದಲಿಸಿದರು. ಕೊನೆಗೂ ನಿನ್ನೆ ಕಣಬೂರ ಗ್ರಾಮದಲ್ಲಿ ಚಿರತೆ ಬೋನಿಗೆ ಬಿದ್ದಿದೆ.

ಹಿರಿಯ ಅರಣ್ಯಾಧಿಕಾರಿ ಮಾರ್ಗದರ್ಶನದಲ್ಲಿ,
ಸೆರೆಸಿಕ್ಕ ಚಿರತೆಯನ್ನು ಬೆಳಗಾವಿ ವನ್ಯಜೀವಿ ವಲಯದ ಭೀಮಗಡ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

ಮುಖ್ಯಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ, ಅಧಿಕಾರಿಗಳಾದ ಪ್ರಶಾಂತ, ಭಾಗ್ಯವಂತ, ಸಂತೋಷ ಆಜೂರ ಹಾಗೂ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ನಡೆಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!