Sunday, August 14, 2022

Latest Posts

2021ರ ಸಾಲಿನ ಮೂಲತ್ವ ವಿಶ್ವ ಪ್ರಶಸ್ತಿಗೆ ಜಾನಪದ ಹಾಡುಗಾರ್ತಿ ಸುಕ್ರಿ ಬೊಮ್ಮಾ ಗೌಡ ಆಯ್ಕೆ

ಹೊಸ ದಿಗಂತ ವರದಿ, ಅಂಕೋಲಾ:

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವರು ನೀಡುವ 2021 ರ ಸಾಲಿನ ಮೂಲತ್ವ ವಿಶ್ವ ಪ್ರಶಸ್ತಿಗೆ ಅಂಕೋಲಾ ತಾಲೂಕಿನ ಬಡಗೇರಿಯ ಜಾನಪದ ಹಾಡುಗಾರ್ತಿ ಜಾನಪದಶ್ರೀ ಪದ್ಮಶ್ರೀ ಸುಕ್ರಿ ಬೊಮ್ಮಾ ಗೌಡ ಅವರು ಆಯ್ಕೆಯಾಗಿದ್ದಾರೆ.
ಸಮಾಜದಲ್ಲಿ ವಿಶೇಷ ಕೊಡುಗೆ ನೀಡುವ ಮೂಲಕ ಗುರುತಿಸಿಕೊಂಡವರಿಗೆ ಮೂಲತ್ವ ಫೌಂಡೇಶನ್ ವತಿಯಿಂದ ಕಳೆದ 6 ವರ್ಷಗಳಿಂದ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತಿದ್ಥು, ಏಳನೇ ವರ್ಷದ ಪ್ರಶಸ್ತಿಗೆ ಸುಕ್ರಜ್ಜಿ ಅವರನ್ನು ಗುರುತಿಸಲಾಗಿದೆ.
ತಾವು ಕಂಡ ಪ್ರತಿ ಕ್ಷಣವನ್ನು ಜಾನಪದ ಹಾಡುಗಳನ್ನಾಗಿ ಹಾಡುವ ಸಾಮರ್ಥ್ಯ ಹೊಂದಿರುವ ಅಂಕೋಲಾದ ಬಡಗೇರಿ ನಿವಾಸಿ ಸುಕ್ರಿ ಗೌಡ ಅವರು ಸಾವಿರಾರು ಜಾನಪದ ಹಾಡುಗಳನ್ನು ತಮ್ಮ ನೆನಪಿನ ಶಕ್ತಿಯ ಸಹಾಯದಿಂದ ಹಾಡಬಲ್ಲರು.
ಸರಾಯಿ ವಿರೋಧಿ ಆಂದೋಲನ ಸೇರಿದಂತೆ ಜನ ಜಾಗೃತಿ ಮೂಡಿಸುವ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಮೂಲಕ ಗುರುತಿಸಿಕೊಂಡಿರುವ ಸುಕ್ರಿ ಗೌಡ ಅವರು ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜನಪದಶ್ರೀ, ನಾಡೋಜ, ಜಾನಪದ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪ್ರಶಸ್ತಿ ಗೆ ಭಾಜನರಾಗುವ ಮೂಲಕ ರಾಜ್ಯಕ್ಕೆ ಹೆಮ್ಮೆ ತಂದಿದ್ದು, ಇದೀಗ ಮತ್ತೊಂದು ಪ್ರಶಸ್ತಿ ಸುಕ್ರಜ್ಜಿ ಅವರನ್ನು ಹುಡುಕಿ ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss