Sunday, April 18, 2021

Latest Posts

ಲಾರಿಗೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾದ ಮಿನಿ ಲಕ್ಷುರಿ ಬಸ್: ಇಬ್ಬರು ಮಹಿಳೆಯರ ಸಾವು

ಹೊಸ ದಿಗಂತ ವರದಿ, ಬಾಗಲಕೋಟೆ:

ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಮಿನಿ ಲಕ್ಷುರಿ ಬಸ್ ರಸ್ತೆಯ ಪಕ್ಕದಲ್ಲಿನ ವಿದ್ಯುತ್ ಕಂಬಕ್ಕೆ ತಾಗಿದ‌ ಪರಿಣಾಮ ಬಸ್ ಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಇಬ್ಬರು ಸುಟ್ಟು ಸಾವನ್ನಪ್ಪಿದ ಘಟನೆ ಲೋಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ಬಸ್ ನಲ್ಲಿದ್ದ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಬೆಳಗಾವಿ ಜಿಲ್ಲೆಯ ಯಾದವಾಡ ಗ್ರಾಮದ‌ ಈರವ್ವ ಗಾಣಿಗೇರ (70), ಅಣ್ಣವ್ವ ಗಾಣಿಗೇರ (58) ಸಾವನ್ನಪ್ಪಿದ‌ವರು ಎಂದು ಗುರುತಿಸಲಾಗಿದೆ.
ಅಥಣಿ ತಾಲೂಕಿನ ಚಮಕೇರಿ ಗ್ರಾಮದ ಮದುವೆಗೆ ಹೋಗಿದ್ದರು. ಚಮಕೇರಿ ಗ್ರಾಮದಿಂದ ಯಾದವಾಡ ಗ್ರಾಮಕ್ಕೆ ವಾಪಸ್ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಜಿಲ್ಲೆಯ ಲೋಕಾಪೂರ‌ ಸಮೀಪ‌ ಉತ್ತೂರು ಪ್ಯಾಕ್ಟರಿ ಬಳಿ ಘಟನೆಯ ಮುಧೋಳ-ಯಾದವಾಡ ರಸ್ತೆಯಲ್ಲಿ ಘಟನೆ ನಡೆದಿದೆ.
ಬಸ್ ಗೆ ಹೊತ್ತಿಕೊಂಡಿದ್ದರಿಂದ ಇಬ್ಬರು ಪ್ರಯಾಣಿಕರು ಸುಟ್ಟು ಕರಕಲಾಗಿದರೆ, ಬೆಂ ಕಿ ಹತ್ತಿಕೊಳ್ತಿದ್ದಂತೆ ಬಸ್ ನಿಂದ ಕೆಳಗಿಳಿದು ಕೆಲವರು ಪ್ರಾಣ ಉಳಿಸಿಕೊಂಡ್ಡಿದ್ದಾರೆ.ಹೊ ಲದಲ್ಲಿ ಟಿಸಿ ಇದ್ದ ವಿದ್ಯುತ್ ಕಂಬಕ್ಕೆ ಬಸ್ ಗುದ್ದಿದೆ ಎನ್ನಲಾಗ್ತಿದೆ. ಬಸ್ನಲ್ಲಿ ಇದ್ದ ಅನೇಕರು ಹೊರ ಬಂದಿದ್ದರಿಂದ ಇನ್ನೂ ಹಲವು ಪ್ರಯಾಣಿಕರ ಪ್ರಾಣ ಉಳಿದಿದೆ.
ಲೋಕಾಪೂರ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss