ಬೈಜೂಸ್ ಪತನದ ಹಾದಿ ಸಾರುತ್ತಿರುವ ಎಡ್ ಟೆಕ್ ವಲಯದ ಕಹಿಸತ್ಯ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ವ್ಯಾಲ್ಯುವೇಶನ್ ವಿಚಾರಕ್ಕೆ ಬಂದಾಗ ಅತಿಮೌಲ್ಯಯುತವಾದದ್ದೆಂಬ ದಾಖಲೆ ಬರೆದಿದ್ದ ಬೈಜೂಸ್ ಎಂಬ ತಂತ್ರಜ್ಞಾನದ ಮೂಲಕ ಶಿಕ್ಷಣ ಪೂರೈಕೆಯ ಕಂಪನಿ ಪತನದ ಹಾದಿಯಲ್ಲಿರುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಅಕ್ಟೋಬರ್ 12ರಂದು ಅದು ತನ್ನ ನಾನಾ ವಿಭಾಗಗಳ ಒಟ್ಟೂ 2,500 ನೌಕರರನ್ನು ಕೆಲಸದಿಂದ ವಜಾ ಮಾಡಿದೆ. ವೆಚ್ಚ ಕಡಿತಕ್ಕೆ ಈ ಕ್ರಮ ಎಂದು ಪ್ರಕಟಣೆ ತಿಳಿಸಿದೆ.

ಕೇವಲ ಈ ನೌಕರರ ವಜಾದ ಸುದ್ದಿಯನ್ನಿಟ್ಟುಕೊಂಡು ಬೈಜೂಸ್ ಪತನದ ಹಾದಿಯಲ್ಲಿದೆ ಎಂದು ವಿಶ್ಲೇಷಿಸುವಂತಿರಲಿಲ್ಲ. ಆದರೆ ಈ ಸಂಸ್ಥೆಯ 2020-21ರ ಬ್ಯಾಲೆನ್ಸ್ ಶೀಟ್ ನೋಡಿದರೆ ಸಾಕು ವಾಸ್ತವ ಅರ್ಥವಾಗುತ್ತದೆ.

ಆ ವಿತ್ತೀಯ ವರ್ಷದಲ್ಲಿ ಅದರ ನಷ್ಟ 4,588 ಕೋಟಿ ರುಪಾಯಿಗಳು!

ಮುಂಬರುವ ವರ್ಷಗಳಲ್ಲಿ ಇನ್ನೆಷ್ಟೇ ಕೋರ್ಸುಗಳನ್ನು ಮಾರುತ್ತೇವೆ ಅಂತ ಕಂಪನಿ ಹೇಳಿದರೂ ಈ ಪರಿ ನಷ್ಟವನ್ನು ರಿಕವರ್ ಮಾಡುವ ಬಗೆ ಕಷ್ಟ. ಸರಳವಾಗಿ ಹೇಳುವುದಾದರೆ ಬೈಜೂಸ್ ಅನ್ನೋದು ವಿವಿಧ ಕೋಚಿಂಗ್ ಗಳನ್ನು ಅಂತರ್ಜಾಲದಲ್ಲಿ ಒದಗಿಸುವ ಕಂಪನಿ. ಇದು ಕೋರ್ಸುಗಳನ್ನು ಮಾರುವ ರೀತಿಗೂ ಅದಾಗಲೇ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಉದಾಹರಣೆಗೆ, ಕೋಡಿಂಗ್ ಕಲಿಯದಿದ್ದರೆ ಭವಿಷ್ಯವೇ ಇಲ್ಲ ಎನ್ನುವ ರೀತಿ ಪ್ರಚಾರ ಮಾಡುವುದು, ಆ ಮೂಲಕ ತನ್ನ ಕೋರ್ಸುಗಳನ್ನು ಮಾರುವುದು, ಅತಿ ದುಡ್ಡು ಖರ್ಚಾಗುವ ಐ ಪಿ ಎಲ್ ಥರದ ಜಾಗಗಳಲ್ಲಿ ಜಾಹೀರಾತಿಗೆ ಇಳಿಯುವುದು ಇತ್ಯಾದಿ.

ಹೀಗೆ ಭಯ ಹುಟ್ಟಿಸುವ, ಜಾಹೀರಾತುಗಳ ಪ್ರಲೋಭನೆಯಲ್ಲಿ ಸೆಳೆಯುವ ಕಾರ್ಯಗಳಿಗೆಲ್ಲ ದಂಡಿಯಾಗಿ ದುಡ್ಡು ಖರ್ಚಾಗುತ್ತದೆ. ಅದನ್ನು ವಸೂಲು ಮಾಡುವುದಕ್ಕೆ ಮತ್ತೆ ಕೋರ್ಸುಗಳ ಬೆಲೆ ಹೆಚ್ಚಿಸದೇ ಇನ್ಯಾವ ದಾರಿ ಇಲ್ಲ ಅಲ್ಲವೇ? ಅಷ್ಟು ದುಬಾರಿ ಬೆಲೆಯಲ್ಲಿ ಎಷ್ಟು ಮಂದಿಯನ್ನು, ಎಷ್ಟು ಸಮಯ ಹಿಡಿದಿಡುವುದಕ್ಕಾದೀತು? 

ಎಡ್ ಟೆಕ್ ಗೆ ಎರ್ರಾಬಿರ್ರಿ ಗ್ಲಾಮರ್ ತುಂಬುವುದಕ್ಕೆ ಹೋಗಿ ಬೈಜೂಸ್ ತನ್ನನ್ನು ತಾನು ಸುಟ್ಟುಕೊಳ್ತಿದೆಯಾ ಅನ್ನೋದು ಈಗಿನ ಪ್ರಶ್ನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!