Wednesday, July 6, 2022

Latest Posts

ನಾಪತ್ತೆಯಾಗಿದ್ದ ಗ್ರಾ.ಪಂ‌.‌ಮಾಜಿ ಸದಸ್ಯ ಶವವಾಗಿ ಕೆರೆಯಲ್ಲಿ ಪತ್ತೆ

ಹೊಸ ದಿಗಂತ ವರದಿ, ವೀರಾಜಪೇಟೆ:

ತೋಟಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಗ್ರಾ.ಪಂ‌.ಮಾಜಿ ಸದಸ್ಯರೊಬ್ಬರು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ವೀರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯತಿ ಸದಸ್ಯ, ನಾಂಗಾಲ ಗ್ರಾಮದ ಬೊಪ್ಪಂಡ ವಸಂತ (46) ಎಂಬವರೇ ಮೃತಪಟ್ಟವರು.
ವೀರಾಜಪೇಟೆ ಸಮೀಪದ ನಾಂಗಾಲ ಗ್ರಾಮದವರಾದ ವಸಂತ ಅವರು ಎಂದಿನಂತೆ ಬುಧವಾರ ಬೆಳಗ್ಗೆ ತಮ್ಮ ತೋಟಕ್ಕೆ ಸ್ಕೂಟರ್’ನಲ್ಲಿ ತೆರಳಿದ್ದು, ಬುಧವಾರ ತೋಟದ ಸಮೀಪದ ಕೆರೆಯ ಪಕ್ಕದಲ್ಲಿ ಅವರ ಸ್ಕೂಟರ್ ಪತ್ತೆಯಾಗಿತ್ತಾದರೂ, ಅವರ ಸುಳಿವು ಲಭ್ಯವಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ವಸಂತ ಕಾಣೆಯಾಗಿರುವ ಬಗ್ಗೆ ಅವರ ಪತ್ನಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆದರೆ ಗುರುವಾರ ತೋಟದ ಪಕ್ಕದ ಕೆರೆಯಲ್ಲಿ ವಸಂತ ಅವರ ಮೃತದೇಹ ಪತ್ತೆಯಾಗಿದ್ದು, ಆಕಸ್ಮಿಕವಾಗಿ ಅವರು ಕೆರೆಗೆ ಬಿದ್ದರೋ, ಅಥವಾ ಅವರ ಸಾವಿನ ಹಿಂದೆ ಬೇರೆ ಕಾರಣಗಳಿವೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss