Saturday, July 2, 2022

Latest Posts

ಹುಚ್ಚುನಾಯಿ ಕಡಿತ : ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಯಲ್ಲಿ ಪರದಾಟ

ಹೊಸ ದಿಗಂತ ವರದಿ, ಯಾದಗಿರಿ:

ಜಿಲ್ಲೆಯ ಗುರುಮಠಕಲ್ ತಾಲೂಕಿನಲ್ಲಿ ಹುಚ್ಚು ನಾಯಿ ಕಾಟ ಜಾಸ್ತಿಯಾಗಿದ್ದು ಒಂದೇ ದಿನ ಏಳು ಮಂದಿಗೆ ನಾಯಿ ಕಚ್ಚಿ ಗಾಸಿಗೊಳಿಸಿದ ಘಟನೆ ಜರುಗಿದೆ.
ಅತ್ತ ಹುಚ್ಚನಾಯಿಗಳ ಕಾಟ ಇತ್ತ ನಾಯಿ ಕಚ್ಚಿದರೆ ಚಿಕಿತ್ಸೆ ಪಡೆಯಲು ಆಸ್ಪತ್ರಗೆ ಹೋದರೆ ಔಷಧಿ ಸಿಗದೆ ಪರದಾಟ ಸಾರ್ವಜನಿಕರದಾಗಿದೆ. ಹುಚ್ಚುನಾಯಿ ಕಡಿತಕ್ಕೆ ಒಳಗಾದ 7 ಜನರಲ್ಲಿ ಬಾಲಕನ ಗಂಭೀರ ಗಾಯಗೊಂಡಿದ್ದು ಅವರನ್ನು ರಾಯಚೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ತಾಲ್ಲೂಕಿನ ಹಲವು ಬಡವಾಣೆಗಳಲ್ಲಿ ನಾಯಿಗಳ ಕಾಟ ಮಿತಿಮೀರಿದೆ. ಹುಚ್ಚು ನಾಯಿ ಜನರನ್ನು ಕಂಡೊಡನೆಯೇ ಅವರ ಮೈಮೇಲೆ ಹಾರಿ ಕಚ್ಚಿ ಪರಾರಿಯಾಗುತ್ತಿವೆ. ಇದರಿಂದ ಸಾರ್ವಜನಿಕರು ಭಯದ ಭೀತಿಯಲ್ಲಿ ತಿರುಗಾಡುವಂತಾಗಿದೆ.
ಅಷ್ಟೇ ಅಲ್ಲದೆ ನಾಯಿ ಕಚ್ಚಿದರೆ ಚಿಕಿತ್ಸೆ ನೀಡುವುದಿರಲಿ ಇದಕ್ಕೆ ಸೂಕ್ತ ಚುಚ್ಚುಮದ್ದು ಸಹ ತಾಲೂಕು ಆಸ್ಪತ್ರೆಯಲ್ಲಿ ಸಂಗ್ರಹವಿಲ್ಲ. ಕೇವಲ ಪ್ರಾಥಮಿಕ ಚಿಕಿತ್ಸೆ ನೀಡಿ ರಾಯಚೂರು ಅಥವಾ ಕಲ್ಬುರ್ಗಿಗೆ ಕೊಂಡೊಯ್ಯುವAತೆ ಸಲಹೆ ಮಾಡುತ್ತಾರೆ ಇಲ್ಲಿನ ವೈದ್ಯರು.
ಕೂಡಲೇ ಆರೋಗ್ಯ ಇಲಾಖೆ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಸರಿಪಡಿಸಿ ತಾಲ್ಲೂಕು ಆರೋಗ್ಯ ಕೇಂದ್ರದಲ್ಲಿ ನಾಯಿ ಕಡಿತದ ಚಿಕಿತ್ಸೆ ಬೇಕಾಗುವ ಔಷಧಿಯನ್ನು ಸಂಗ್ರಹಿಸಿ ಇಡುವಂತೆ ಹಾಗೂ ಪುರಸಭೆ ಅಧಿಕಾರಿಗಳು ಹುಚ್ಚು ನಾಯಿ ಹಿಡಿಯಲು ಕಾರ್ಯಚರಣೆ ನಡೆಸುವಂತೆ ಸಾರ್ವಜನಿಕರ ಒತ್ತಾಯ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss