spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಂಜಿನ ನಗರಿ ಮಡಿಕೇರಿ ದಸರಾ ಉತ್ಸವಕ್ಕೆ ಅದ್ಧೂರಿ ತೆರೆ

- Advertisement -Nitte

ಹೊಸದಿಗಂತ ವರದಿ, ಕೊಡಗು:

ವಿಜಯ ದಶಮಿಯ ರಾತ್ರಿಗೆ ಬೆಳಕಿನ ರಂಗವಲ್ಲಿಯನ್ನು ಮೂಡಿಸುವಂತೆ ದಶಮಂಟಪಗಳ ಶೋಭಾಯಾತ್ರೆ ನಡೆಯುವುದರೊಂದಿಗೆ ಮಂಜಿನ ನಗರಿ ಮಡಿಕೇರಿಯ ದಸರಾ ಉತ್ಸವಕ್ಕೆ ತೆರೆ ಬಿದ್ದಿತು.
ಕೊರೋನಾ ಹಿನ್ನೆಲೆಯ ನಿರ್ಬಂಧಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲದೆ, ನಿರೀಕ್ಷೆಯ ವಾದ್ಯಗೋಷ್ಠಿಗಳಿಲ್ಲದೆ ನಡೆದ ಮಂಟಪಗಳ ಮೆರವಣಿಗೆ ಸತತ ಎರಡನೇ ವರ್ಷವೂ ಪ್ರೇಕ್ಷಕರಲ್ಲಿ ನಿರಾಸೆ ಮೂಡಿಸಿತು.
ದಸರಾ ಉತ್ಸವದ ದಿನವಾದ ಶುಕ್ರವಾರ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಮಧ್ಯಾಹ್ನದವರೆಗೆ ಬಿಸಿಲ ವಾತಾವರಣ ಕಂಡು ಬಂದಿತಾದರೂ ಮಧ್ಯಾಹ್ನದ ಬಳಿಕ ಮಂಜು, ಮೋಡ ಕವಿದ ವಾತಾವರಣ, ಆಗೊಮ್ಮೆ ಈಗೊಮ್ಮೆ ಸುರಿದ ಮಳೆ ದಸರಾ ಸಂಭ್ರಮದ ನಿರೀಕ್ಷೆಯಲ್ಲಿದ್ದ ಜನರ ಉತ್ಸಾಹಕ್ಕೆ ತಣ್ಣೀರು ಎರಚಿತು.
ಮೆರವಣಿಗೆಗೆ ಚಾಲನೆ: ಸಂಪ್ರದಾಯದಂತೆ ಐತಿಹಾಸಿಕ ಹಿನ್ನೆಲೆಯ ಮಡಿಕೇರಿ ದಸರಾ ಉತ್ಸವ ದಶ ಮಂಟಪಗಳ ಶೋಭಾ ಯಾತ್ರೆಗೆ, ನಗರದ ಪೇಟೆ ಶ್ರೀ ರಾಮಮಂದಿರದ ‘ಸಂಜೀವಿನಿ ಪರ್ವತ ಹೊತ್ತ ಆಂಜನೇಯ ಸ್ವಾಮಿ’ಯ ಆಕರ್ಷಕ ಕಲಾಕೃತಿ ಒಳಗೊಂಡ ಮಂಟಪದ ಮೆರವಣಿಗೆಯ ಆರಂಭದೊಂದಿಗೆ ಚಾಲನೆ ದೊರಕಿತು.
ವರ್ಷಂಪ್ರತಿಯಂತೆ ಪೇಟೆ ಶ್ರೀರಾಮ ಮಂದಿರ ಮಂಟಪ ನಾಲ್ಕು ಶಕ್ತಿ ದೇವತಗಳಾದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ, ಗೌಳಿ ಬೀದಿಯ ಶ್ರೀ ಕಂಚಿ ಕಾಮಾಕ್ಷಿಯಮ್ಮ, ಮಡಿಕೇರಿಯ ಕೋಟೆಯ ಪಾರ್ಶ್ವದ ಶ್ರೀ ದಂಡಿನ ಮಾರಿಯಮ್ಮ ಮತ್ತು ಶ್ರೀ ಕೊಟೆ ಮಾರಿಯಮ್ಮ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಅಲ್ಲಿನ ಮಂಟಪಗಳ ಮೆರವಣಿಗೆ ಆರಂಭಗೊಂಡಿತು.
ಇವುಗಳೊಂದಿಗೆ ಶ್ರೀ ಕೋಟೆ ಗಣಪತಿ, ದೇಚೂರು ಬಾಲಕ ಬಲರಾಮ ಮಂದಿರ, ಶ್ರೀ ಚೌಡೇಶ್ವರಿ, ಶ್ರೀ ಕೋದಂಡ ರಾಮ, ಕರವಲೆ ಬಾಡಗ ಶ್ರೀ ಭಗವತಿ ಮಹಿಷಮರ್ಧಿನಿ ದೇವಸ್ಥಾನದ ಆಕರ್ಷಕ ಮಂಟಪಗಳು ಶೋಭಾಯಾತ್ರೆಯ ಮೆರುಗನ್ನು ಹೆಚ್ಚಿಸಿದವು.
ಬನ್ನಿ ಮಂಟಪದೆಡೆಗೆ ಸಾಗಿದ ಕರಗಗಳು: ನವರಾತ್ರಿಯ ಆರಂಭದೊಂದಿಗೆ ನಗರದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ, ಶ್ರೀ ಕಂಚಿ ಕಾಮಾಕ್ಷಿಯಮ್ಮ, ಶ್ರೀ ದಂಡಿನ ಮಾರಿಯಮ್ಮ ಮತ್ತು ಶ್ರೀ ಕೋಟೆ ಮಾರಿಯಮ್ಮ ದೇವರ ಕರಗಗಳ ನಗರ ಮೆರವಣಿಗೆ ಆರಂಭಗೊಳ್ಳುತ್ತದೆ. ಈ ನಾಲ್ಕು ಕರಗಗಳು ವಿಜಯದಶಮಿಯ ರಾತ್ರಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸ್ವೀಕರಿಸಿದ ಬಳಿಕ ಪಂಪಿನಕೆರೆಯ ಬನ್ನಿ ಮಂಟಪದೆಡೆಗೆ ಸಾಗಿದವು.
ವರುಣನ ಆತಂಕ,ಕೋವಿಡ್ ಭೀತಿ ಮಡಿಕೇರಿ ದಸರಾ ಸಂಭ್ರಮಕ್ಕೆ ಕಡಿವಾಣ ಹಾಕಿತಾದರೂ, ವಿರಳ ಪ್ರೇಕ್ಷಕರ ನಡುವೆಯೂ ಶೋಭಾಯಾತ್ರೆ ನಡೆಯುವ ಮೂಲಕ ದಸರಾ ಜನೋತ್ಸವಕ್ಕೆ ತೆರೆ ಬಿದ್ದಿತು

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss