Wednesday, June 29, 2022

Latest Posts

ಮದುವೆಗೆ ಬಂದೇ ಬರುತ್ತೇನೆ ಎಂದು ಹೇಳಿ ಹೋಗದ ವ್ಯಕ್ತಿಯ ಮನೆ ಬಾಗಿಲಿಗೆ ಬಂತು ಊಟದ ಬಿಲ್‌!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಹಿಂದೆ ಮದುವೆಗೆ ಅಥವಾ ರಿಸೆಪ್ಷನ್‌ಗೆ ಬಂದೇ ಬರ್ತೇನೆ ಎಂದು ಹೇಳಿ ಹೋಗದೆ ಇರುತ್ತಿದ್ದರೆ, ಯಾರು ಕೇಳುವವರಿರುವುದಿಲ್ಲ. ಕೆಲವೊಮ್ಮೆ ಕಟ್ಟುಪಾಡಿಗೆ ಬಿದ್ದು, ಬರುತ್ತೇವೆ ಎಂದು ಸುಳ್ಳು ಹೇಳಿದರೆ, ಇನ್ನು ಕೆಲವೊಮ್ಮೆ ಯಾವುದೋ ಕಾರಣಕ್ಕೆ ಹೋಗಲು ಸಾಧ್ಯವಾಗುವುದಿಲ್ಲ.
ಆದರೆ ಇಂದು ಕೊರೋನಾ ಸಂಕಷ್ಟ ಸಮಯದಲ್ಲಿ ಜನರ ಮಿತಿವಿದ್ದು, ಬರುತ್ತೇನೆ ಎಂದು ಹೋಗದಿದ್ದರೆ ಮತ್ತಷ್ಟು ನಿರಾಸೆ ಉಂಟಾಗುವುದು ಸಹಜ. ಹೀಗೇ ಒಂದು ಘಟನೆ ನಡೆದಿದ್ದು, ಪರಿಚಯಸ್ಥರೊಬ್ಬರ ಮದುವೆಗೆ ಬಂದೇ ಬರುತ್ತೇನೆ ಎಂದು ವಾಗ್ದಾನ ಮಾಡಿ ಕೊನೆಗೆ ಮದುವೆಗೆ ಹೋಗದ ವ್ಯಕ್ತಿಯೊಬ್ಬನಿಗೆ ಮನೆಗೇ ಮದುವೆಯ ಊಟದ ಬಿಲ್‌ ಬಂದಿದ್ದು, ಆ ಬಿಲ್‌ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ಮದುವೆಯ ದಿನ ಏರ್ಪಡಿಸಿದ್ದ ಡಿನ್ನರ್‌ ಪಾರ್ಟಿಗೆ ವ್ಯಕ್ತಿಯೊಬ್ಬ ತನ್ನ ಪತ್ನಿಯ ಸಹಿತ ಬಂದೇ ಬರುವುದಾಗಿ ಹೇಳಿದ್ದ. ಕೊರೋನಾ ಹಿನ್ನೆಲೆಯಲ್ಲಿ ಎಷ್ಟು ಮಂದಿ ಬರುತ್ತಾರೆಯೋ ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಆ ವ್ಯಕ್ತಿಗೆ ಹೋಗಲು ಸಾಧ್ಯವಾಗಿರಲಿಲ್ಲ. ನಂತರ ಮದುಮಗಳು ಈ ವ್ಯಕ್ತಿಗೆ ಆತನ ಹಾಗೂ ಆತನ ಪತ್ನಿಯ ಪಾಲಿನ ಭೋಜನಕ್ಕೆ ಆಗುವ ಖರ್ಚನ್ನು ಕಟ್ಟಿಕೊಡುವಂತೆ ಕೋರಿ $240 (ಸುಮಾರು 17,700 ರೂಪಾಯಿ) ಬಿಲ್‌ ಒಂದನ್ನು ಕಳುಹಿಸಿಕೊಟ್ಟಿದ್ದಾಳೆ. ತಲಾ $120ರಂತೆ ಇಬ್ಬರಿಗೆ ಡಿನ್ನರ್‌ ವ್ಯವಸ್ಥೆಗೆ ಇಷ್ಟು ಖರ್ಚಾಗಿದೆ .
‘ನೀವು ಬರುತ್ತೇವೆ ಎಂದು ಹೇಳಿದ ಕಾರಣದಿಂದ ನಿಮ್ಮ ಸೀಟುಗಳನ್ನು ಬುಕ್‌ ಮಾಡಲಾಗಿತ್ತು. ನೀವು ಬರುವುದಿಲ್ಲ ಎಂದು ನಮಗೆ ಮೊದಲೇ ಫೋನ್ ಮಾಡಿ ತಿಳಿಸಲಿಲ್ಲ. ಆದ್ದರಿಂದ ನಿಮ್ಮ ಬಿಲ್‌ ನಾವು ಪಾವತಿಸಲು ಸಾಧ್ಯವಾಗವುದಿಲ್ಲ. ನೀವೇ ಅದನ್ನು ಪಾವತಿಸಬೇಕಿದೆ’ ಎಂದು ಅದರಲ್ಲಿ ಬರೆಯಲಾಗಿದೆ. ‘ನೀವು ಪೇಪಾಲ್ ಅಥವಾ ಜೆಲ್ಲೆ ಆಯಪ್‌ ಮೂಲಕ ಪಾವತಿ ಮಾಡಬಹುದು. ಹೇಗೆ ಪಾವತಿ ಮಾಡಲು ಇಚ್ಚಿಸುವಿರಿ ಎಂದು ಮೊದಲೇ ನಮಗೆ ತಿಳಿಸಿದರೆ ಅದನ್ನು ನೋಡಲು ಅನುಕೂಲ ಆಗುತ್ತದೆ’ ಎಂದು ಬಿಲ್‌ ಜತೆಗಿರುವ ಚೀಟಿಯಲ್ಲಿ ಬರೆಯಲಾಗಿದ್ದು, ಅದೀಗ ವೈರಲ್‌ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss