Monday, August 15, 2022

Latest Posts

ಪೊಲೀಸ್ ಮನೆಗೆ ಕನ್ನ ಹಾಕಲು ಬಂದ… ಏಸಿ ಆನ್ ಮಾಡಿ ಗಡದ್ದು ನಿದ್ದೆಗೆ ಜಾರಿದ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಪೊಲೀಸ್ ಮನೆಗೇ ಕನ್ನ ಹಾಕಲು ಬಂದ ಕಳ್ಳ, ಹಾಸಿಗೆ ನೋಡುತ್ತಿದ್ದಂತೆಯೇ ತನ್ನ ಕಾಯಕವನ್ನೇ ಮರೆತು ಗಡದ್ದು ನಿದ್ದೆಗೆ ಜಾರಿದ ವಿಲಕ್ಷಣ ಘಟನೆ ಥೈಲ್ಯಾಂಡ್‌ನಲ್ಲಿ ನಡೆದಿದೆ.

ಮುಂಜಾನೆ 2 ಗಂಟೆಯ ಸುಮಾರಿಗೆ ಫೆಟ್ಟಾಬುಲ್ ಪ್ರಾಂತ್ಯದ ವಿಚಿಯನ್ ಬುರಿ ಜಿಲ್ಲಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೋರ್ವರ ಮನೆಗೆ ಈ ಕಳ್ಳ ನುಗ್ಗಿದ್ದ. ಅದಾಗಲೇ ತುಂಬಾ ದಣಿದಿದ್ದ ಕಳ್ಳ ಮನೆಯ ಕೋಣೆಯಲ್ಲಿದ್ದ ಎ.ಸಿಯನ್ನು ಆನ್ ಮಾಡಿದ್ದಲ್ಲದೆ ಅಲ್ಲೇ ನಿದ್ರೆಗೆ ಜಾರಿದ್ದಾನೆ! ಮಗಳು ಮನೆಯಲ್ಲಿ ಇಲ್ಲದ ಕಾರಣ ಆಕೆಯ ಕೋಣೆಯ ಎಸಿ ಹೇಗೆ ಆನ್ ಆಗಿದೆ ಎಂದು ಪೊಲೀಸ್ ಅಧಿಕಾರಿ ಸಂಶಯಗೊಂಡು ನೋಡಿದಾಗ ಕಳ್ಳ ಗಡದ್ದಾಗಿ ಗೊರಕೆಹೊಡೆಯುತ್ತಿದ್ದುದು ಕಂಡುಬಂದಿದೆ.
ಇದೀಗ ಈತನನ್ನು ಠಾಣೆಗೆ ಹಸ್ತಾಂತರಿಸಲಾಗಿದ್ದು, ಪೊಲೀಸರು ಈತನ ನಿದ್ದೆಬಿಡಿಸುವ ಕಾಯಕ ಶುರುಹಚ್ಚಿಕೊಂಡಿದ್ದಾರೆ!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss