Tuesday, July 5, 2022

Latest Posts

ಬೆಳ್ಳಿ ಗೆದ್ದ ಮೀರಾಬಾಯಿ ಚಾನುಗೆ ‘ಹೆಚ್ಚುವರಿ ಪೊಲೀಸ್‌ ಅಧೀಕ್ಷಕಿ’ ಹುದ್ದೆ ನೀಡಿ ಗೌರವಿಸಿದ ಮಣಿಪುರ ಸರ್ಕಾರ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………….

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಟೋಕಿಯೋ ಒಲಿಂಪಿಕ್ಸ್​ನ ವೇಟ್​ ಲಿಫ್ಟಿಂಗ್​ನಲ್ಲಿ ತಿಹಾಸಿಕ ಸಾಧನೆ ಮಾಡಿರುವ ಮೀರಾಬಾಯಿ ಚಾನು ಭಾರತಕ್ಕೆ ಆಗಮಿಸಿದ್ದು, ಜಪಾನ್​ನಿಂದ ನೇರವಾಗಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಸಾಧಕಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.
ಚಾನು ಅವರಿಗೆ ಏರ್​ಪೋರ್ಟ್​ನಲ್ಲೇ ಆರ್​ಟಿ-ಪಿಸಿಆರ್​​ ಪರೀಕ್ಷೆಗೊಳಪಡಿಸಲಾಯಿತು. ಇದಾದ ಬಳಿಕ ಬಿಗಿ ಭದ್ರತೆಯಲ್ಲಿ ಅವರನ್ನು ತವರಿಗೆ ಕಳುಹಿಸಿಕೊಡಲಾಗಿದೆ.
ಹೆಚ್ಚುವರಿ ಪೊಲೀಸ್‍ ಅಧೀಕ್ಷಕಿ ಗೌರವ
ಬೆಳ್ಳಿ ಪದಕ ಗೆದ್ದು ಇತಿಹಾಸ ರಚನೆ ಮಾಡಿರುವ ಚಾನುಗೆ ಈಗಾಗಲೇ ಮಣಿಪುರ ಸರ್ಕಾರ 1 ಕೋಟಿ ರೂ. ಬಹುಮಾನ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಕ್ರೀಡಾ ಕೋಟಾದಲ್ಲಿ ಅವರಿಗೆ ಹೆಚ್ಚುವರಿ ಪೊಲೀಸ್​ ಅಧಿಕ್ಷಕಿ ಸ್ಥಾನ ನೀಡಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳ ಕಾರ್ಯದರ್ಶಿ ಮಾಹಿತಿ ಹೊರಹಾಕಿದ್ದಾರೆ.
ತನ್ನ ಗೆಲುವಿನ ಕುರಿತು ಪ್ರತಿಕ್ರಿಯೆ ನೀಡಿದ ಚಾನು, ‘ ಟೋಕಿಯೋ ಒಲಿಂಪಿಕ್ಸ್​ ತುಂಬಾ ಸ್ಪರ್ಧಾತ್ಮಕವಾಗಿತ್ತು. ಆದರೆ ಪದಕ ಗೆಲ್ಲುವ ಇರಾದೆಯಿಂದ 2016ರಿಂದಲೂ ನಾನು ತಯಾರಿ ನಡೆಸಿದ್ದೆ. ಕಳೆದ 5 ವರ್ಷಗಳಿಂದ ಎಲ್ಲವನ್ನೂ ತ್ಯಾಗ ಮಾಡಿದ್ದೇನೆ. ಅದರ ಫಲವಾಗಿ ಇದೀಗ ಪದಕ ಗೆದ್ದಿದ್ದೇನೆ.’ ಎಂದು ಹೇಳಿದರು.
ಪ್ರಧಾನಿ ಮೋದಿ ಅವರಿಗೆ ಧನ್ಯವಾದ
ಇನ್ನು ಅಭ್ಯಾಸ ನಡೆಸಲು ಯುಎಸ್​ಗೆ ತೆರಳಲು ಕೊನೆಯ ಗಳಿಗೆಯಲ್ಲಿ ವಿಮಾನ ಮಿಸ್​ ಆಗುವುದರಲ್ಲಿತ್ತು. ಈ ವೇಳೆ ಪ್ರಧಾನಿ ಮೋದಿಯವರು ನಮಗೆ ತೆರಳಲು ಎಲ್ಲ ರೀತಿಯ ಸಹಾಯ ಮಾಡಿದ್ದರು ಎಂದು ತಿಳಿಸಿದ್ದು, ಅವರಿಗೆ ಧನ್ಯವಾದ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss