Tuesday, August 16, 2022

Latest Posts

ಬದಲಾಗುತ್ತಿವೆ ಮಿಲಿಟರಿಯ ಹಳೆ ಸಾಗಣೆ ವಿಮಾನಗಳು: ಇದು ಬರೋಬ್ಬರಿ 20,000 ಕೋಟಿ ರೂ. ಒಪ್ಪಂದ

ಹೊಸದಿಗಂತ ಆನ್‌ಲೈನ್ ಡೆಸ್ಕ್:

56 ಮಿಲಿಟರಿ ಸಾರಿಗೆ ವಿಮಾನಗಳನ್ನು ಖರೀದಿಸಲು ಕೇಂದ್ರವು ಏರ್‌ಬಸ್‌ನೊಂದಿಗೆ 20,000 ಕೋಟಿ ಒಪ್ಪಂದ ಮಾಡಿಕೊಂಡಿದೆ.
ಭಾರತೀಯ ವಾಯುಪಡೆಯು ಅವ್ರೋ-748 ವಿಮಾನಗಳನ್ನು ಬದಲಿಸಿ, 56ಸಿ-295 ಮಧ್ಯಮ ಸಾರಿಗೆ ವಿಮಾನಗಳನ್ನು ಖರೀದಿಸಲು ನಿರ್ಧರಿಸಿದ್ದು, ಏರ್‌ಬಸ್ ಡಿಫೆನ್ಸ್ ಹಾಗೂ ಸ್ಪೇಸ್ ಆಫ್ ಸ್ಪೇನ್‌ನೊಂದಿಗೆ ರಕ್ಷಣಾ ಸಚಿವಾಲಯ ಒಪ್ಪಂದ ಮಾಡಿಕೊಂಡಿದೆ.
16 ವಿಮಾನಗಳನ್ನು ಸ್ಪೇನ್‌ನಿಂದ ಸಿದ್ಧ ರೂಪದಲ್ಲಿಯೇ ತರಿಸಿಕೊಳ್ಳಲಾಗುತ್ತದೆ. ಇನ್ನುಳಿದ 40 ವಿಮಾನಗಳನ್ನು ಭಾರತದ ಟಾಟಾ ಸಮೂಹದ ನೇತೃತ್ವದ ಒಕ್ಕೂಟವು ತಯಾರಿಸಲಿದೆ.
ಈ ರೀತಿಯ ಒಪ್ಪಂದ ದೇಶದಲ್ಲಿ ಇದೇ ಮೊದಲು. ಎಲ್ಲ ವಿಮಾನಗಳನ್ನು ಸ್ಥಳೀಯ ಎಲೆಕ್ಟ್ರಾನಿಕ್ ವಾರ್ಫೇರ್ ಸೂಟ್‌ನೊಂದಿಗೆ ಸ್ಥಾಪಿಸಲಾಗುವುದು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss