ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು

ಹೊಸದಿಗಂತ ವರದಿ,ಬಳ್ಳಾರಿ:

ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ನಗರದ ಅಹಂಬಾವಿ ಪ್ರದೇಶದ ತಮ್ಮ ನಿವಾಸದ ಕಛೇರಿಯಲ್ಲಿ ಭಾನುವಾರ ಜನತಾ ದರ್ಶನ ನಡೆಸಿದರು. ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರ ಅಹವಾಲುಗಳನ್ನು ಸಚಿವರು ಆಲಿಸಿದರು.
ಈ ಸಂದರ್ಭದಲ್ಲಿ ಜನರ ಅಹವಾಲು ಸ್ವೀಕರಿಸಿದ ಸಚಿವರು, ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದರೇ ಕೆಲ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಇಲಾಖೆ ಮೇಲಧಿಕಾರಿಗಳೊಂದಿಗೆ ಚೆರ್ಚಿಸಿ, ಕೂಡಲೇ ಜನರ ಸಮಸ್ಯೆಗೆ ಸ್ಪಂದಿಸಿ ಎಂದು ಸೂಚಿಸಿದರು.
ಇದೇ ವೇಳೆ ಸಚಿವರು ಗೋ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಆಹಾರ ನೀಡಿ, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.

ಕ್ಷೇತ್ರದ ಜನರೇ ನನ್ನ ಉಸಿರು: ಸುದ್ದಿಗಾರರೊಂದಿಗೆ ಸಚಿವ ಶ್ರೀರಾಮುಲು ಅವರು ಮಾತನಾಡಿ, ಕ್ಷೇತ್ರದ ಜನರೇ ನನ್ನ ಉಸಿರು, ಅವರ ಸೆವೆಗಾಗಿ ನಾನು ಸದಾ ಸಿದ್ದನಿರುವೆ, ರಾಜಕೀಯ ಕರ್ಮಭೂಮಿ ರಾಜ್ಯದ ವಿವಿಧ ಜಿಲ್ಲೆಗಳಾದರೇ ರಾಜಕೀಯ ಜನ್ಮ‌ನೀಡಿದ ತವರು ಜಿಲ್ಲೆ ಬಳ್ಳಾರಿ ಹಾಗು ಬಳ್ಳಾರಿಯ ಜನರನ್ನು ಎಂದಿಗೂ ಮರೆಯೋಲ್ಲ, ಪಾಲಿಕೆ ಸದಸ್ಯನಿಂದ ಹಿಡಿದು ಸಚಿವರಾಗುವವರಿಗೆ ಇಲ್ಲಿನ ಜನರು ಪ್ರೀತಿಯಿಂದ ಆರ್ಶಿವಾದಿಸಿ, ಬೆಂಬಲಿಸಿ, ಪ್ರೋತ್ಸಾಹಿಸಿದ್ದಾರೆ, ಯಾವುದೇ ಉನ್ನತ ಸ್ಥಾನಕ್ಕೆ ತೆರಳಿದರೂ ಅದಕ್ಕೆ ಬಳ್ಳಾರಿಯ ಜನರೇ ನನಗೆ ಸ್ಪೂರ್ತಿ, ಅವರ ಸೇವೆಗಾಗಿ ನಾನು ಯ್ಯಾವ ತ್ಯಾಗಕ್ಕೂ ಸಿದ್ದನಿರುವೆ ಎಂದರು. ಕಳೆದ ಹದಿನಾರು ವರ್ಷದ ಬಳಿಕ ಬಳ್ಳಾರಿ, ತವರು ಜಿಲ್ಲೆಯ ಉಸ್ತುವಾರಿ ದೊರೆತಿದೆ, ಅವದಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ, ಜಿಲ್ಲೆಯ ಅಭಿವೃದ್ಧಿಗೆ ನನ್ನದೇ ಆದ ನಾನಾ‌ ಕನಸುಗಳಿವೆ, ಅವುಗಳನ್ನು ಸಾಕಾರ ಗೊಳಿಸಲು ಎಲ್ಲರ ಸಹಕಾರ ಅತ್ಯಗತ್ಯ, ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರವೇ ಇದ್ದು, ಅಭಿವೃದ್ಧಿಗೆ ಯಾವುದೇ ಅನುದಾನದ ಕೊರತೆ ಯಾಗೋಲ್ಲ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಬೂಡಾ ಅಧ್ಯಕ್ಷ ಕಾರ್ಕಲತೋಟ ಪಾಲನ್ನ, ತಿಮ್ಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!